ತಮಿಳುನಾಡಿನಲ್ಲಿ ಕೋವಿಡ್‌ಗೆ ಕಾಂಗ್ರೆಸ್‌ ಅಭ್ಯರ್ಥಿ ಬಲಿ

Team Newsnap
1 Min Read

ತಮಿಳುನಾಡಿನ ವಿಧಾನ ಸಭಾ ಚುನಾವಣೆಗೆ ಕಾಂಗ್ರೆಸ್ಸಿಗೆ ಕ್ಷೇತ್ರದಿಂದ ಸ್ಪರ್ಧಿಸಿದ್ದ ಕಾಂಗ್ರೆಸ್‌ ಅಭ್ಯರ್ಥಿ ಕೋವಿಡ್‌ಗೆ ಬಲಿಯಾಗಿದ್ದಾರೆ.

ಮೇ 2ರಂದು ಮತ ಏಣಿಕೆ ನಡೆಯಲಿದೆ. ಸಾವನ್ನಪ್ಪಿದ ಅಭ್ಯರ್ಥಿ ಗೆಲುವು‌ ಸಾಧಿಸಿ ದರೆ ಮಾತ್ರ ಮರು ಚುನಾವಣೆ ನಡೆಯಲಿದೆ.

ಪಿಎಸ್ ಡಬ್ಯ್ಲೂ ಮಾಧವ ರಾವ್‌ ಕರೋನಾ ಸೋಂಕಿಗೆ ಮೃತಪಟ್ಟ ಕಾಂಗ್ರೆಸ್ ಅಭ್ಯರ್ಥಿ.

ಕಳೆದ ತಿಂಗಳು ರಾವ್‌ ಅವರಿಗೆ ಕರೋನಾ ಸೋಂಕು ಕಂಡು ಬಂದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸ ಲಾಗಿತ್ತು. ಆದರೆ, ಚಿಕಿತ್ಸೆಗೆ ಸ್ಪಂದಿಸ ರಾವ್‌ ಭಾನುವಾರ ನಿಧನರಾದರು.

ರಾವ್ ಮೃತಪಟ್ಟ ಕಾರಣಕ್ಕಾಗಿ ಕ್ಷೇತ್ರದಲ್ಲಿ ಮರುಮತದಾನ ನಡೆಸಲಾಗುವುದಿಲ್ಲ. ಒಂದು ವೇಳೆ, ಚುನಾವಣೆಯ ಫಲಿತಾಂಶದಲ್ಲಿ ರಾವ್‌ ಗೆದ್ದರೆ ಮಾತ್ರ ಮರು ಮತದಾನ ನಡೆಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.

ಕಾನೂನು ಸಲಹೆಗಾರರೂ, ಉದ್ಯಮಿಯೂ ಆಗಿದ್ದ ರಾವ್‌, ಹಲವಾರು ವರ್ಷಗಳಿಂದ ಕಾಂಗ್ರೆಸ್‌ನಲ್ಲಿ ಸಕ್ರಿಯವಾಗಿ ಸದಸ್ಯರಾಗಿದ್ದಾರೆ. ಜಿಲ್ಲಾ ಕಾಂಗ್ರೆಸ್‌ ಸಮಿತಿಯಲ್ಲಿ ಹಲವು ಹುದ್ದೆಗಳನ್ನು ನಿಭಾಯಿಸಿದ್ದರು.

ನಾಮಪತ್ರ ಸಲ್ಲಿಸಿದ್ದ ಕೆಲವೇ ದಿನಗಳಲ್ಲಿ ಅನಾರೋಗ್ಯ ಕಂಡುಬಂದಿತ್ತು, ಕೆಲವೇ ದಿನದಲ್ಲಿ ಚುನಾವಣಾ ಪ್ರಚಾರ ಅಭಿಯಾನವನ್ನು ಸ್ಥಗಿತಗೊಳಿಸಿ ಆಸ್ಪತ್ರೆಗೆ ದಾಖಲಾಗಿದ್ದರು. ಶ್ವಾಸಕೋಶದ ತೀವ್ರ ಸೋಂಕಿನಿಂದಾಗಿ ಕೋವಿಡ್‌ ವಾರ್ಡ್‌ನಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗಿತ್ತು.

ಕಳೆದ ಕೆಲವು ದಿನಗಳಿಂದ ಮಾಧವ ರಾವ್ ಅವರಿಗೆ ಹೃದಯಾಘಾತ ಮತ್ತು ತೀವ್ರ ಶ್ವಾಸಕೋಶದ ಸೋಂಕು ತಗುಲಿತ್ತು ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ.

Share This Article
Leave a comment