January 1, 2025

Newsnap Kannada

The World at your finger tips!

thalkadu

ತಲಕಾಡಿನಲ್ಲಿ ಪಂಚಲಿಂಗ ದರ್ಶನ :ಇಂದಿನಿಂದ ಪೂಜಾ ಕಾರ್ಯ ಆರಂಭ

Spread the love

ತಲಕಾಡಿನಲ್ಲಿ ಇಂದಿನಿಂದ ಡಿ 19 ರವರಗೆ ಪಂಚಲಿಂಗ ದರ್ಶನ ಮಹೋತ್ಸವ ಪೂಜಾ ಕಾರ್ಯಗಳು ನಡೆಯಲಿವೆ.

ಪೂಜಾ ಕಾರ್ಯಕ್ರಮಗಳ ವಿವರ:
  • ದಕ್ಷಿಣ ಕಾಶಿ, ಗಜಾರಣ್ಯ ಕ್ಷೇತ್ರದಲ್ಲಿ ನೆಲೆಸಿರುವ ಪಂಚಲಿಂಗ ಸ್ವರೂಪನಾದ ಶಿವ ವೈದ್ಯನಾಥೇಶ್ವರ ಅನ್ವರ್ಥ ನಾಮದ ಶ್ರೀಕ್ಷೇತ್ರದಲ್ಲಿ ಡಿ.10 ರಂದು ಅಂಕುರಾರ್ಪಣೆ, ನವಗ್ರಹ ಕಲಶಸ್ನಪನದೊಂದಿಗೆ ಪ್ರಾರಂಭವಾಯಿತು.
  • ಡಿ.11 ರಂದು ಧ್ವಜಾರೋಹಣ, ರಕ್ಷಾ ಬಂಧನ, ಪುಷ್ಪಮಂಟಪಾರೋಹಣ, ವೃಷಭಾರೋಹಣ,
  • ಡಿ.14 ರಂದು ಮಹಾಭಿಷೇಕ, ಬೆ. 7.30 ಪಂಚಲಿಂಗ ದರ್ಶನ, ಗಜಾರೋಹಣ ಉತ್ಸವ,
  • ಡಿ.15 ರಂದು ಶ್ರೀಮದಿವ್ಯ ಬ್ರಹ್ಮರಥೋತ್ಸವ, ಹಂಸವಾಹನೋತ್ಸವ,
  • ಡಿ.16 ರಂದು ಶಯನೋತ್ಸವ, ಅಶ್ವಾರೋಹಣ, ಮೃಗಯಾತ್ರೋತ್ಸವ
  • ಡಿ.17 ರಂದು ಅವಭೃತ ತೀರ್ಥಸ್ನಾನ, ತೆಪ್ಪೋತ್ಸವ
  • ಡಿ.18 ರಂದು ಪಂಚಾಭಿಷೇಕ, ಪಂಚೋಪಚಾರ, ಪೂರ್ವಕ ಕೈಲಾಸವಾಹನೋತ್ಸವ.
  • ಡಿ.19 ರಂದು ನಂದಿ ವಾಹನೋತ್ಸವ ಪೂಜಾ ಕೈಂಕರ್ಯಗಳು ನಡೆಯಲಿದೆ.
1 ಸಾವಿರ ಜನರಿಗೆ ಮಾತ್ರ ಅವಕಾಶ:

ಕೋವಿಡ್ ಹಿನ್ನೆಲೆಯಲ್ಲಿ ಈ ಬಾರಿ ನಿರೀಕ್ಷಿತ ಮಟ್ಟದಲ್ಲಿ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಗಲಿಲ್ಲ. ಸಾಂಪ್ರಾದಾಯಿಕ ಪೂಜಾ ವಿಧಿ ವಿಧಾನಗಳೊಂದಿಗೆ ಉತ್ಸವ ಜರುಗಲಿದೆ.

ದಿನಕ್ಕೆ 1 ಸಾವಿರ ಜನರಿಗೆ ಮಾತ್ರ ಭಕ್ತರಿಗೆ ಪ್ರವೇಶ ನೀಡಲು ಜಿಲ್ಲಾಡಳಿತ ಮುಂದಾಗಿದೆ.

Copyright © All rights reserved Newsnap | Newsever by AF themes.
error: Content is protected !!