December 23, 2024

Newsnap Kannada

The World at your finger tips!

bardar

ಅಫ್ಘಾನಿಸ್ತಾನದಿಂದ ಭಾರತಕ್ಕೆ ಆಮದು‌ – ರಫ್ತು ಸ್ಥಗಿತಗೊಳಿಸಿದ ತಾಲಿಬಾನ್ ಉಗ್ರರು

Spread the love

ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‌ ವಶ ಪಡಿಸಿಕೊಂಡ ನಂತರ ತಾಲಿಬಾನ್ ಭಾರತದೊಂದಿಗಿನ ಎಲ್ಲಾ ಆಮದು ಮತ್ತು ರಫ್ತುಗಳನ್ನು ನಿಲ್ಲಿಸಿದೆ.

ಪಾಕಿಸ್ತಾನದ ಸಾಗಾಣಿಕಾ ಮಾರ್ಗಗಳ ಮೂಲಕ ಸರಕು ಸಾಗಣೆಯನ್ನು ತಾಲಿಬಾನ್ ನಿಲ್ಲಿಸಿದೆ.

ಭಾರತವು ಸಕ್ಕರೆ, ಔಷಧಿಗಳು, ಉಡುಪು, ಚಹಾ, ಕಾಫಿ, ಮಸಾಲೆಗಳು ಮತ್ತು ಟ್ರಾನ್ಸ್ಮಿಷನ್ ಟವರ್ ಗಳನ್ನು ಅಫ್ಘಾನಿಸ್ತಾನಕ್ಕೆ ರಫ್ತು ಮಾಡುತ್ತದೆ. ಮುಖ್ಯವಾಗಿ ಡ್ರೈ ಫ್ರೂಟ್ಸ್ ಸೇರಿದಂತೆ ಕೆಲವು ವಸ್ತುಗಳನ್ನು ಭಾರತವು ಆಮದು ಮಾಡಿಕೊಳ್ಳುತ್ತಿದೆ. ಇದಲ್ಲದೆ ಅಫ್ಘಾನಿಸ್ತಾನದಿಂದ ಸಣ್ಣ ಪ್ರಮಾಣದ ಗಮ್ ಮತ್ತು ಈರುಳ್ಳಿಯನ್ನು ಭಾರತಕ್ಕೆ ಆಮದು ಮಾಡಿಕೊಳ್ಳಲಾಗುತ್ತದೆ.

ಅಫ್ಘಾನಿಸ್ತಾನದಿಂದ ರಫ್ತು ಮತ್ತು ಆಮದು ನಿಲ್ಲಿಸಲಾಗಿದೆ ಅಂತಾ ಭಾರತೀಯ ರಫ್ತು ಸಂಸ್ಥೆಯ ಒಕ್ಕೂಟದ ಮಹಾನಿರ್ದೇಶಕ(ಎಫ್‌ಐಇಒ) ಡಾ.ಅಜಯ್ ಸಹಾಯ್ ಹೇಳಿದ್ದಾರೆ.

ನಾವು ಅಫ್ಘಾನಿಸ್ತಾನದ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅಲ್ಲಿಂದ ಆಮದುಗಳು ಪಾಕಿಸ್ತಾನದ ಸಾಗಣೆ ಮಾರ್ಗದ ಮೂಲಕ ಬರುತ್ತವೆ. ಇಲ್ಲಿಯವರೆಗೆ ತಾಲಿಬಾನ್ ಪಾಕಿಸ್ತಾನಕ್ಕೆ ಸರಕು ಸಾಗಣೆಯನ್ನು ನಿಲ್ಲಿಸಿದೆ. ಆದ್ದರಿಂದ ಆಮದು ನಿಂತಿದೆ’ ಎಂದು ಸಹಾಯ್ ತಿಳಿಸಿದ್ದಾರೆ.

ಭಾರತವು ಅಫ್ಘಾನಿಸ್ತಾನದ ಅತಿದೊಡ್ಡ ವ್ಯಾಪಾರ ಪಾಲುದಾರರಲ್ಲಿ ಒಂದಾಗಿದೆ. ಯುದ್ಧಪೀಡಿತ ರಾಷ್ಟ್ರದಲ್ಲಿ ಭಾರತವು ಗಮನಾರ್ಹ ಪ್ರಮಾಣದ ಹೂಡಿಕೆಯನ್ನು ಮಾಡಿದೆ. ವಾಸ್ತವವಾಗಿ ನಾವು ಅಫ್ಘಾನಿಸ್ತಾನದ ಅತಿದೊಡ್ಡ ವ್ಯಾಪಾರ ಪಾಲುದಾರರಲ್ಲಿ ಒಬ್ಬರಾಗಿದ್ದೇವೆ. 2021ರಲ್ಲಿ ಅಫ್ಘಾನಿಸ್ತಾನಕ್ಕೆ ನಮ್ಮ ರಫ್ತುಗಳು ಸುಮಾರು 835 ಮಿಲಿಯನ್ ಅಮೆರಿಕನ್ ಡಾಲರ್ ನಷ್ಟಿದೆ. ನಾವು ಸುಮಾರು 510 ಮಿಲಿಯನ್ ಅಮೆರಿಕನ್ ಡಾಲರ್ ಮೌಲ್ಯದ ಸರಕುಗಳನ್ನು ಆಮದು ಮಾಡಿಕೊಂಡಿದ್ದೇವೆ’ ಎಂದು ಹೇಳಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!