January 29, 2026

Newsnap Kannada

The World at your finger tips!

talakaveri coorg entry fee timings holidays reviews header

ತಲಕಾವೇರಿ ‘ತೀರ್ಥೋದ್ಭವ’ ಅ.17ರಂದು ಮಧ್ಯರಾತ್ರಿ 1.27ಕ್ಕೆ

Spread the love

ಮಡಿಕೇರಿ:

ಜಿಲ್ಲೆಯ ತಲಕಾವೇರಿಯಲ್ಲಿ ತೀರ್ಥೋದ್ಭವಕ್ಕೆ ಅಕ್ಟೋಬರ್.17ರಂದು ಮಧ್ಯರಾತ್ರಿ 1.27ಕ್ಕೆ ಮೂಹೂರ್ತ ನಿಗದಿ ಆಗಿದೆ, ಭಾಗಮಂಡಲದ ತಲಕಾವೇರಿ ದೇವಾಲಯ ಸಮಿತಿಯಿಂದ ಈ ಮಾಹಿತಿ ನೀಡಲಾಗಿದೆ

ಕೊಡಗಿನ ತಲಕಾವೇರಿಯಲ್ಲಿರುವ ತೀರ್ಥ ಕುಂಡಿಕೆಯಲ್ಲಿ ಅಕ್ಟೋಬರ್ 17ರಂದು ಮಂಗಳವಾರ ರಾತ್ರಿ 1:27ಕ್ಕೆ ಕರ್ಕಾಟಕ ಲಗ್ನದಲ್ಲಿ ಕಾವೇರಿ ತೀರ್ಥ ರೂಪದಲ್ಲಿ ಉಗಮವಾಗಲಿದೆ. ಕಾವೇರಿಯ ಉಗಮ ಸ್ಥಳ ತಲಕಾವೇರಿಯ ಪವಿತ್ರ ಕುಂಡಿಕೆಯಲ್ಲಿ ಕಾವೇರಿ ತೀರ್ಥರೂಪಿಣಿಯಾಗಿ ಉಕ್ಕಿ ಬರುತ್ತಾಳೆಂಬ ನಂಬಿಕೆ ಇದೆ.

ಕೊಡವರ ಕುಲದೇವತೆಯಾದ ಕಾವೇರಿಯು, ಪ್ರತಿವರ್ಷವೂ ತುಲಾ ಸಂಕ್ರಮಣದಂದು (ಅಕ್ಟೋಬರ್ ತಿಂಗಳಿನಲ್ಲಿ) ಇಲ್ಲಿ ನೀರುಬುಗ್ಗೆಗಳಾಗಿ ಕಾಣಿಸಿಕೊಳ್ಳುತ್ತಾಳೆ. ಇದನ್ನು ‘ತೀರ್ಥೋದ್ಭವ’ ಎನ್ನುವರು.

error: Content is protected !!