ಮೈಸೂರು, ಫೆಬ್ರವರಿ 11: ಪ್ರತಿಷ್ಠಿತ ತಾಜ್ ಗ್ರೂಪ್ ಮೈಸೂರಿನಲ್ಲಿ ಹೊಸ ಐಷಾರಾಮಿ ಹೋಟೆಲ್ ಆರಂಭಿಸಲಿದೆ. ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ (ಜೆಎಲ್‌ಆರ್) ಅಡಿಯಲ್ಲಿರುವ ಐತಿಹಾಸಿಕ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ನಿರ್ವಹಣೆಯನ್ನು ಈ ಗ್ರೂಪ್ ಪಡೆಯುವುದಿಲ್ಲ ಎಂಬುದು ಖಚಿತವಾಗಿದೆ.
ಟಾಟಾ ಸಮೂಹದ ಇಂಡಿಯನ್ ಹೋಟೆಲ್ಸ್ ಕಂಪನಿ ಲಿಮಿಟೆಡ್ (ಐಎಚ್‌ಸಿಎಲ್) ತನ್ನ ತಾಜ್ ಬ್ರಾಂಡ್ ಮೂಲಕ ಮೈಸೂರಿನಲ್ಲಿ ಹೋಟೆಲ್ ಆರಂಭಿಸಲು ಒಪ್ಪಂದ ಮಾಡಿಕೊಂಡಿದೆ. ಈ ಒಡಂಬಡಿಕೆಯಿಂದ ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್ ನಿರ್ವಹಣೆ ತಾಜ್ ಗ್ರೂಪ್ ವಹಿಸಿಕೊಳ್ಳಲಿದೆ.
ಅಂತಾರಾಷ್ಟ್ರೀಯ ಮಟ್ಟದ ಸೇವೆ:
ಇಂಡಿಯನ್ ಹೋಟೆಲ್ಸ್ ಕಂಪನಿ ಈಗಾಗಲೇ 12 ದೇಶಗಳ 150ಕ್ಕೂ ಹೆಚ್ಚು ಸ್ಥಳಗಳಲ್ಲಿ ತನ್ನ ಹೋಟೆಲ್‌ಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಮೈಸೂರಿನಲ್ಲಿ ತಾಜ್ ಬ್ರಾಂಡ್ ಹೋಟೆಲ್ ಆರಂಭವಾಗುವುದರಿಂದ ದೇಶಿ ಮತ್ತು ವಿದೇಶಿ ಪ್ರವಾಸಿಗರಿಗೆ ಆಕರ್ಷಣೆಯ ಕೇಂದ್ರವಾಗಲಿದೆ.
ಹೋಟೆಲ್ ಒಪ್ಪಂದದ ವಿವರ:
ಮೈಸೂರಿನ ಎಂ.ಜಿ. ರಸ್ತೆಯಲ್ಲಿರುವ ರಾಡಿಸನ್ ಬ್ಲೂ ಪ್ಲಾಜಾ ಹೋಟೆಲ್ ಪ್ರಸ್ತುತ ಡಿಎಂ ಸೌತ್ ಇಂಡಿಯಾ ಹಾಸ್ಪಿಟಾಲಿಟಿ ಒಡೆತನದಲ್ಲಿದೆ. ಈ ಹೋಟೆಲ್ ನಿರ್ವಹಣೆ ಕುರಿತ ಒಪ್ಪಂದ ಮಾರ್ಚ್‌ನಲ್ಲಿ ಅಂತ್ಯಗೊಳ್ಳಲಿದ್ದು, ಅದನ್ನು ಮುಂದುವರಿಸಲು ಐಎಚ್‌ಸಿಎಲ್ ಜತೆಗೆ ಹೊಸ ಒಪ್ಪಂದ ಮಾಡಲಾಗಿದೆ. ಮಾರ್ಚ್ ಬಳಿಕ, ತಾಜ್ ಬ್ರಾಂಡ್ ಈ ಹೋಟೆಲ್ ನಿರ್ವಹಣೆ ಕೈಗೆತ್ತಿಕೊಳ್ಳಲಿದೆ.
ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ಗುತ್ತಿಗೆ ಪ್ರಕ್ರಿಯೆ:
ಈ ಮೊದಲು, ಐಎಚ್‌ಸಿಎಲ್ ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ನಿರ್ವಹಣೆಗೆ ಆಸಕ್ತಿ ತೋರಿಸಿದ್ದರೂ, ಷರತ್ತು ಹಾಗೂ ನಿಯಮಗಳ ಕಾರಣದಿಂದ ಈ ಯೋಜನೆಯಿಂದ ಹಿಂದೆ ಸರಿದಿದೆ.ಇದನ್ನು ಓದಿ –ಬೆಂಗಳೂರು ಹೊರತಾಗಿ ಇತರ ಭಾಗಗಳಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಆದ್ಯತೆ: ಡಿ.ಕೆ. ಶಿವಕುಮಾರ್
ಈಗ, ಜಂಗಲ್ ಲಾಡ್ಜಸ್ ಮತ್ತು ರೆಸಾರ್ಟ್ಸ್ (ಜೆಎಲ್‌ಆರ್) ಈ ಐತಿಹಾಸಿಕ ಹೋಟೆಲ್‌ನ್ನು ಖಾಸಗಿಯವರಿಗೆ ಗುತ್ತಿಗೆ ನೀಡಲು ಟೆಂಡರ್ ಪ್ರಕ್ರಿಯೆ ಆರಂಭಿಸಿದೆ. ಈ ಟೆಂಡರ್ ಫೆಬ್ರವರಿ 18ರಂದು ತೆರೆಯಲಿದ್ದು, ಲಲಿತ ಮಹಲ್ ಪ್ಯಾಲೇಸ್ ಹೋಟೆಲ್ ನಿರ್ವಹಣೆಯನ್ನು ಯಾವ ಖಾಸಗಿ ಸಂಸ್ಥೆ ವಹಿಸಿಕೊಳ್ಳಲಿದೆ ಎಂಬುದು ಮುಂದಿನ ದಿನಗಳಲ್ಲಿ ನಿರ್ಧಾರವಾಗಲಿದೆ.


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು