ಭಾರತೀಯ ಮಾಧ್ಯಮಗಳಲ್ಲಿ ತೈವಾನ್‌ನ ಜಾಹೀರಾತು ಪ್ರಸಾರವಾಗಿದ್ದಕ್ಕೆ ಚೀನಾ ರಾಯಭಾರಿ ಕಛೇರಿ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ ಬೆನ್ನಲ್ಲೇ, ಚೀನಾ ಎಚ್ಚರಿಕೆಗೆ ಪ್ರತಿಕ್ರಿಯಿಸಿರುವ ತೈವಾನ್ ‘ಗೆಟ್‌ಲಾಸ್ಟ್’ ಎಂದು ಹೇಳಿದೆ.
ತೈವಾನ್ ರಾಷ್ಟೀಯ ದಿನ ಪ್ರಯುಕ್ತ ಭಾರತದ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟವಾಗಿತ್ತು. ಅದರಲ್ಲಿ ತೈವಾನ್ ಸರ್ಕಾರ, ಅದರಲ್ಲಿ ವಿಶ್ವದ ಅತೀದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ ಈಗ ತೈವಾನ್ ಜೊತೆಗಾರ ಎಂದು ತೈವಾನ್ ಹೇಳಿತ್ತು. ಇದನ್ನು ನೋಡಿದ ಚೀನಾದ ರಾಯಭಾರಿ ಕಛೇರಿ ಭಾರತೀಯ ಮಾಧ್ಯಮಗಳಗೆ ‘ಭಾರತೀಯ ಮಾಧ್ಯಮಗಳು ತಪ್ಪು ಸಂದೇಶ ರವಾನಿಸಬಾರದು. ತೈವಾನ್ ಪ್ರತ್ಯೇಕ ದೇಶವಲ್ಲ. ಇದು ಚೀನಾದ ಭಾಗ’ ಎಂದು ಎಚ್ಚರಿಕೆಯ ಸೂಚನೆ ನೀಡಿತ್ತು.
‘ಭಾರತೀಯ ಮಾಧ್ಯಮಗಳು ನಿಯಮ ಉಲ್ಲಂಘಿಸಿಬಾರದು. ಜನರಿಗೆ ತಪ್ಪು ಸಂದೇಶ ರವಾನಿಸಬಾರದು. ಪ್ರಮುಖವಾಗಿ ತೈವಾನ್ ಒಂದು ದೇಶವಲ್ಲ. ರಿಪಬ್ಲಿಕ್ ಆಫ್ ಚೀನಾದ ಭಾಗ. ಸಂಪೂರ್ಣ ಚೀನಾದಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಪ್ರತಿನಿಧಿಸುವ ಏಕೈಕ ಕಾನೂನುಬದ್ಧ ಸರ್ಕಾರವಾಗಿದೆ’ ಎಂದು ಹೇಳಿತ್ತು.
ಇದಕ್ಕೆ ಖಡಕ್ ಉತ್ತರ ನೀಡಿರುವ ತೈವಾನ್ ಜೋಸೆಫ್ ವು, ‘ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಮಾಧ್ಯಮಗಳಿಗೆ ಸಂಪೂರ್ಣ ಸ್ವಾತಂತ್ರ್ಯ ಇದೆ. ಆದರೆ ಚೀನಾ ತನ್ನ ನೀತಿಸಂಹಿತೆಯನ್ನು ಜಾರಿ ಮಾಡಲು ಪ್ರಯತ್ನಿಸುತ್ತಿದೆ. ಇದಕ್ಕೆ ಭಾರತೀಯರ ಉತ್ತರ ಗೆಟ್ ಲಾಸ್ಟ್’ ಎಂದು ಹೇಳಿದೆ.
More Stories
ಮಂಗಳೂರಿನಲ್ಲಿ ಬಾಲಕಿಗೆ ಸಾಮೂಹಿಕ ಅತ್ಯಾಚಾರ – ಮೂವರಿಗೆ ಜೀವಾವಧಿ ಶಿಕ್ಷೆ
ಥಿಯೇಟರ್ ಮಾಲೀಕನನ್ನು ಕಟ್ಟಿಹಾಕಿ ಮನೆಯ ಕೆಲಸದವರಿಂದ ಕಳ್ಳತನ – ದಂಪತಿ ಬಂಧನ
ನಾಲ್ವರು ಕೆ.ಎ.ಎಸ್. ಅಧಿಕಾರಿಗಳ ವರ್ಗಾವಣೆ