January 16, 2025

Newsnap Kannada

The World at your finger tips!

money hot

ಎಸಿಬಿ ದಾಳಿಗೆ ಗಾಬರಿ: ಮನೆಯಲ್ಲೇ 15 ಲಕ್ಷ ರು ಹಣ ಸುಟ್ಟ ತಹಶೀಲ್ದಾರ್

Spread the love

ಭ್ರಷ್ಟಾಚಾರ ನಿಗ್ರಹ ದಳದ(ಎಸಿಬಿ) ದಾಳಿಗೆ ಹೆದರಿ ತಹಶೀಲ್ದಾರರೊಬ್ಬರು 15 ಲಕ್ಷ ರೂ.ಗಳನ್ನು ಸುಟ್ಟ ಘಟನೆ ರಾಜಸ್ಥಾನದಲ್ಲಿ ಜರುಗಿದೆ.

ಎಸಿಬಿ ಸಿರೋಹಿ ತಹಶೀಲ್ದಾರ್ ಮನೆ ಮೇಲೆ ದಾಳಿ ನಡೆಸಿತ್ತು. ಈ ವೇಳೆ ಗಾಬರಿಗೊಂಡ ತಹಶೀಲ್ದಾರ್ ಮನೆಯೊಳಗಡೆಯೇ 15 ರಿಂದ 20 ಲಕ್ಷ ರೂ.ಗಳನ್ನು ಸುಟ್ಟು ಹಾಕಿದ್ದಾರೆ.

ಎಸಿಬಿ ತಂಡವು ಭೂಮಿ ದಾಖಲೆಯ ಇನ್ಸ್‌ಪೆಕ್ಟರ್ ಪರ್ವತ್ ಸಿಂಗ್ 1 ಲಕ್ಷ ರು ಲಂಚ ಪಡೆಯುತ್ತಿದ್ದಾಗ ಪತ್ತೆ ಹಚ್ಚಿತ್ತು. ಕಲ್ಪೇಶ್ ಕುಮಾರ್ ಜೈನ್ ಬೇಡಿಕೆಯ ಹಿನ್ನೆಲೆಯಲ್ಲಿ ಲಂಚ ನೀಡಲಾಗಿತ್ತು ಎಂದು ಎಸಿಬಿ ತಿಳಿಸಿದೆ.

ಈ ಆರೋಪದ ಹಿನ್ನಲೆಯಲ್ಲಿ ತಹಶೀಲ್ದಾರ್ ಕಲ್ಪೇಶ್ ಕುಮಾರ್ ಜೈನ್ ಮನೆಯೊಳಗೆ ಬೀಗ ಹಾಕಿಕೊಂಡು ಸುಮಾರು 15-20 ಲಕ್ಷದ ಹಣದ ನೋಟನ್ನು ಬೆಂಕಿ ಹಾಕಿ ಸುಟ್ಟಿದ್ದಾರೆ.

ಆರೋಪಿ ತಹಶೀಲ್ದಾರ್ 1 ಲಕ್ಷ ರೂ. ಲಂಚ ಪಡೆದಿದ್ದಾರೆ ಎಂಬ ಮಾಹಿತಿ ಮೇರೆಗೆ ಎಸಿಬಿ ತಂಡ ದಾಳಿ ನಡೆಸಿತ್ತು.

Copyright © All rights reserved Newsnap | Newsever by AF themes.
error: Content is protected !!