November 13, 2024

Newsnap Kannada

The World at your finger tips!

money

ಪತ್ನಿಯನ್ನು ಅವಿರೋಧವಾಗಿ ಆಯ್ಕೆ ಮಾಡಿ : 25 ಲಕ್ಷ ರು ಆಫರ್ ಪಡೆಯಿರಿ ತಹಶಿಲ್ದಾರ್ !

Spread the love

ಗ್ರಾಪಂ ಚುನಾವಣೆಯಲ್ಲಿ ಹತ್ತಾರು ಹೊಸ ಆಟಗಳು ನಡೆಯುತ್ತವೆ. ಅದರಲ್ಲಿ ಒಂದು ತಹಶಿಲ್ದಾರ್ ಒಬ್ಬರು ತಮ್ಮ ಪತ್ನಿಯನ್ನು ಗ್ರಾಮಸ್ಥರು ಅವಿರೋಧವಾಗಿ ಆಯ್ಕೆ ಮಾಡಿದರೆ 25 ಲಕ್ಷ ರು ಗಳನ್ನು ಗ್ರಾಮದ ದೇವಸ್ಥಾನದ ಅಭಿವೃದ್ಧಿಗಾಗಿ ನೀಡುವ ಆಫರ್ ಕೊಟ್ಟಿದ್ದಾರೆ.

ಗ್ರಾಪಂ ಚುನಾವಣೆಯಲ್ಲಿ ಸ್ಧರ್ಧೆ ಮಾಡುವುದು, ಆಯ್ಕೆಯಾಗುವುದು ಎಲ್ಲವೂ ಪ್ರಿಸ್ಟೀಜ್ ಆದರೆ ಮಂಡ್ಯ ತಾಲೂಕಿನ ಕೆರಗೋಡು ಗ್ರಾಪಂನ ವ್ಯಾಪ್ತಿಯ ಹಳ್ಳಿಯಲ್ಲಿ 25 ಲಕ್ಷ ರು ಗ್ರಾಮದ ದೇವಸ್ಥಾನಕ್ಕೆ ಕೊಡುವೆ ನನ್ನ ಹೆಂಡತಿಯನ್ನು ಅವಿರೋಧವಾಗಿ ಆಯ್ಕೆ ಮಾಡಿ ಎಂದು ತಹಶಿಲ್ದಾರರೊಬ್ಬರು ಗ್ರಾಮದ ಮುಖಂಡರ ಎದುರು ಬೇಡಿಕೆ ಇಟ್ಟಿರುವುದು ವರದಿಯಾಗಿದೆ.

ತಮ್ಮ ಪತ್ನಿಯ ಅವಿರೋಧ ಆಯ್ಕೆಗಾಗಿ ₹ 25 ಲಕ್ಷ ನೀಡಲು ಮುಂದಾಗಿರುವುದು ಕುತೂಹಲ ಹಾಗೂ ಸವಾಲಾಗಿ ಪರಿಣಮಿಸಿದೆ.

ನಿನ್ನೆ ಭಾನುವಾರ ಮನೆಗೊಬ್ಬರಂತೆ ಸಭೆ ಸೇರಿ ತಹಶೀಲ್ದಾರ್‌ ಪತ್ನಿಯ ಆಯ್ಕೆಗೆ ಒಪ್ಪಿಗೆ ಸೂಚಿಸಿದ್ದಾರೆ. ಗ್ರಾಮದಲ್ಲಿ ದೇವಾಲಯ ನಿರ್ಮಾಣಕ್ಕೆ ₹ 25 ಲಕ್ಷ ಹಾಗೂ ಗ್ರಾಮದ ಅಭಿವೃದ್ಧಿಗೆ ಇನ್ನೂ ಹೆಚ್ಚಿನ ಹಣಕಾಸಿನ ಸಹಾಯ ಮಾಡಲು ತಹಶೀಲ್ದಾರ್‌ ಭರವಸೆ ನೀಡಿರುವುದ ರಿಂದ ಒಮ್ಮತದ ಆಯ್ಕೆ ಆಗುವ ಸಂಭವವಿದೆ.

ಗ್ರಾಮಕ್ಕೆ ತಹಶಿಲ್ದಾರರು ಈ ಆಫರ್ ನೀಡಿದ ನಂತರ ನಾಮಪತ್ರ ಸಲ್ಲಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ಇತರ ಅಭ್ಯರ್ಥಿಗಳು ಕಣದಿಂದ ಹಿಂದೆ ಸರಿಯಲು ಮುಂದಾಗಿದ್ದಾರೆಂದು ಹೇಳಲಾಗಿದೆ.

ತಹಶೀಲ್ದಾರ್‌ ಪತ್ನಿ ಅವಿರೋಧ ಆಯ್ಕೆ ಯಾದರೆ ಮುಂದಿನ ದಿನಗಳಲ್ಲಿ ಹೆಚ್ಚು ಸರ್ಕಾರಿ ಸೌಲಭ್ಯಗಳು ಲಭಿಸಿ ಗ್ರಾಮ ಅಭಿವೃದ್ಧಿ ಹೊಂದುತ್ತದೆ ಎಂಬ ಆಶಯ ಗ್ರಾಮಸ್ಥರದ್ದು.

Copyright © All rights reserved Newsnap | Newsever by AF themes.
error: Content is protected !!