December 19, 2024

Newsnap Kannada

The World at your finger tips!

cricket,t20,india

T20 series from tomorrow: KL Rahul out - captaincy for Pant

ನಾಳೆಯಿಂದ ಟಿ20 ಸರಣಿ : ಕೆ.ಎಲ್ ರಾಹುಲ್ ಔಟ್ – ಪಂತ್‍ಗೆ ನಾಯಕತ್ವದ ಪಟ್ಟ

Spread the love

ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವೆ ನಾಳೆಯಿಂದ ಟಿ20 ಸರಣಿ ಆರಂಭಕ್ಕೂ ಮುನ್ನವೇ ಗಾಯಾಳುವಾಗಿ ನಾಯಕ ಕೆ.ಎಲ್ ರಾಹುಲ್ ಸರಣಿಯಿಂದ ಹೊರಬಿದ್ದಿದ್ದಾರೆ.

ಇದನ್ನು ಓದಿ –ಜೆಡಿಎಸ್‌ಗೆ ಅಡ್ಡ ಮತದಾನದ ಭೀತಿ – ಶಾಸಕರು ರೆಸಾರ್ಟ್‌ಗೆ ಶಿಫ್ಟ್?

ಟೀಂ ಇಂಡಿಯಾದ ಖಾಯಂ ನಾಯಕ ರೋಹಿತ್ ಶರ್ಮಾ ಅವರಿಗೆ ವಿಶ್ರಾಂತಿ ನೀಡಲಾಗಿದೆ

ತಂಡವನ್ನು ಮುನ್ನಡೆಸುವ ಹೊಣೆ ಕೆ.ಎಲ್ ರಾಹುಲ್‍ಗೆ ಹೊರಿಸಲಾಗಿತ್ತು. ಆದರೆ ಸರಣಿ ಆರಂಭಕ್ಕೂ ಮುನ್ನ ರಾಹುಲ್ ಗಾಯಾಳುವಾಗಿ ಸರಣಿಯಿಂದಲೇ ಹೊರ ನಡೆದಿದ್ದಾರೆ.

ರಾಹುಲ್ ಮತ್ತು ಕುಲ್‍ದೀಪ್ ಯಾದವ್ ಗಾಯಾಳುವಾಗಿರುವುದರಿಂದ ತಂಡದಿಂದ ಹೊರ ನಡೆದಿದ್ದು, ರಿಷಬ್ ಪಂತ್‍ಗೆ ನಾಯಕತ್ವ ನೀಡಲಾಗಿದೆ ಎಂದು ಬಿಸಿಸಿಐ ಸ್ಪಷ್ಟಪಡಿಸಿದೆ.

ಈಗಾಗಲೇ ಸರಣಿಯಿಂದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಬುಮ್ರಾಗೆ ವಿಶ್ರಾಂತಿ ನೀಡಲಾಗಿತ್ತು. ಇದೀಗ ರಾಹುಲ್ ಗಾಯಾಳುವಾಗಿರುವುದರಿಂದ ಪಂತ್ ನಾಯಕನಾದರೆ, ಹಾರ್ದಿಕ್ ಪಾಂಡ್ಯಗೆ ಉಪನಾಯಕನ ಪಟ್ಟ ಕಟ್ಟಲಾಗಿದೆ. ನಾಳೆಯಿಂದ ದಕ್ಷಿಣ ಆಫ್ರಿಕಾ ವಿರುದ್ಧ ಟೀಂ ಇಂಡಿಯಾ 5 ಪಂದ್ಯಗಳ ಟಿ20 ಸರಣಿ ಆರಂಭಗೊಳ್ಳಲಿದೆ.

Copyright © All rights reserved Newsnap | Newsever by AF themes.
error: Content is protected !!