ಮದುವೆಗೆ ಬಟ್ಟೆ ಖರೀದಿಸಿ ಊರಿಗೆ ಹಿಂತಿರುಗಿ ಬರುತ್ತಿದ್ದ ಸ್ವಿಫ್ಟ್ ಕಾರಿಗೆ ತೂಫಾನ್ ಜೀಪ್ ಢಿಕ್ಕಿ ಹೊಡೆದ ಪರಿಣಾಮ ಹಸೆಮಣೆ ಏರಬೇಕಿದ್ದ ವರ ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಈತನ ತಾಯಿ ಸೇರಿದಂತೆ ಕಾರಿನಲ್ಲಿದ್ದ ಮೂವರಿಗೆ ತೀವ್ರಗಾಯಗಳಾದ ಘಟನೆ ಚನ್ನರಾಯಪಟ್ಟಣದ ಬಳಿ ಶನಿವಾರ ಬೆಳಗಿನ ಜಾವ ಜರುಗಿದೆ.
ಹುಣಸೂರಿನ ಹಿರಿಕ್ಯಾತನಹಳ್ಳಿ ನಿವಾಸಿ ಜಗದೀಶ್ ರ ಪುತ್ರ ಅಭಿಷೇಕ್ ಗೌಡ (26 ವ) ಸಾವನ್ನಪ್ಪಿದ್ದಾರೆ. ತಾಯಿ ಮಂಜುಳ ಹಾಗೂ ನಟರಾಜ್ ಎಂಬುವವರಿಗೆ ತೀವ್ರಗಾಯಗಳಾಗಿವೆ. ಚನ್ನರಾಯಪಟ್ಟಣ ಮತ್ತು ಹಾಸನದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪುತ್ರ ಅಭಿಷೇಕ್ ಗೌಡನ ಮದುವೆಗಾಗಿ ದಾವಣಗೆರೆಯಿಂದ ಬಟ್ಟೆ ಖರೀದಿಸಿದ್ದ ಜಗದೀಶ್ ಬಟ್ಟೆಯೊಂದಿಗೆ ಟಿ.ಟಿ.ವಾಹನದಲ್ಲಿ ಹುಣಸೂರಿನತ್ತ ಬರುತ್ತಿದ್ದರು.
ಮದುಮಗ ಅಭಿಷೇಕ್ ಗೌಡ ಹಾಗೂ ತಾಯಿ ಮಂಜುಳ ಮತ್ತವನ ಸ್ನೇಹಿತ ನಟರಾಜ್ ಹಾಗೂ ಯುವತಿ ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದರು. ಈ ವೇಳೆ ಬೆಳಗಿನ ಜಾವ 3.30ರ ಸಮಯಕ್ಕೆ ಚನ್ನರಾಯಪ್ಪಣದ ಬಳಿ ಮಂಜು ಬೀಳುತ್ತಿದ್ದರಿಂದ ಎದುರಿನಿಂದ ಬರುತ್ತಿದ್ದ ತುಫಾನ್ ಜೀಪ್ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಈ ರಭಸಕ್ಕೆ ಕಾರು ನಜ್ಜುಗುಜ್ಜಾಗಿದೆ ನಟರಾಜ್ ಸ್ಥಳದಲ್ಲೇ ಸಾವನ್ನಪ್ಪಿದರೆ, ಮುಂದೆ ಕುಳಿತಿದ್ದ ನಟರಾಜ್ ಗೆ ತೀವ್ರಗಾಯವಾಗಿದೆ. ಮಂಜುಳರ ಕೈ ಕಾಲುಗಳಿಗೆ ತೀವ್ರ ಪೆಟ್ಟು ಬಿದ್ದಿದೆ.
More Stories
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು
ಕ್ಷಣಾರ್ಧದಲ್ಲಿ 33 ಲಕ್ಷ ಕಳ್ಳತನ: ಓರ್ವ ಆರೋಪಿ ಬಂಧನ
ಚಾಮರಾಜನಗರದಲ್ಲಿ ಖಾಸಗಿ ಬಸ್ ಪಲ್ಟಿ: ಓರ್ವ ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ