ಟೆಕ್ಕಿ ಕೆಲಸಕ್ಕೆ ಸೆಲ್ಯೂಟ್ : ಸ್ವಾತಿ ಈಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ

Team Newsnap
1 Min Read

ಎಂಜಿನಿಯರಿಂಗ್ ಮುಗಿಸಿ ಲಕ್ಷ ಲಕ್ಷ ಸಂಬಳ ಪಡೆಯುತ್ತಿದ್ದ ಟೆಕ್ಕಿ ಈಗ ದಾವಣಗೆರೆ ಜಗಳೂರು ತಾಲೂಕಿನ ಸೊಕ್ಕೆ ಗ್ರಾಮ ಪಂಚಾಯಿತಿಯ ಅಧ್ಯಕ್ಷೆಯಾಗಿ ಆಯ್ಕೆಯಾಗಿ, ಗ್ರಾಮಗಳ ಅಭಿವೃದ್ಧಿಗೆ ಪಣ ತೊಟ್ಟಿದ್ದಾರೆ.

ಗ್ರಾಮ ಪಂಚಾಯಿತಿಯಲ್ಲಿರುವ ಸೌಲಭ್ಯಗಳನ್ನು ಬಡವರಿಗೆ ದೊರಕುವಂತೆ ಮಾಡಿದರೆ ಸಾಕು, ಅಭಿವೃದ್ಧಿ ಸಾಧ್ಯ ಎನ್ನುವ ಧ್ಯೇಯವನ್ನು ಇಟ್ಟುಕೊಂಡಿದ್ದ ಸಾಫ್ಟ್‌ವೇರ್ ಸ್ವಾತಿಯವರು, ಪಂಚಾಯಿತಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಚುನಾವಣೆಗೂ ಸ್ಪರ್ಧಿಸಿದರು. ಉನ್ನತ ಶಿಕ್ಷಣ ಪಡೆದ ಸ್ವಾತಿ, ತಾಲೂಕಿನಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಲ್ಲದೆ ಸೊಕ್ಕೆ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಯಿತು. ಹೀಗಾಗಿ ವಿದ್ಯಾವಂತೆಯಾಗಿರುವ ಸ್ವಾತಿ ತಿಪ್ಪೇಸ್ವಾಮಿ ಅಧ್ಯಕ್ಷೆಯಾಗಿ ಸಹ ಆಯ್ಕೆಯಾಗಿದ್ದಾರೆ.

swathi1

ಸ್ವಾತಿ ಮಾಹಿತಿ ತಂತ್ರಜ್ಞಾನದಲ್ಲಿ ಬಿಇ ಪದವೀಧರೆ. ಸ್ವಾತಿ, ಬೆಂಗಳೂರು ನಗರದಲ್ಲಿ ವಾಸ. ಅಲ್ಲದೆ ಅಮೆರಿಕದಲ್ಲಿ ಐದು ವರ್ಷ ಪ್ರತಿಷ್ಠಿತ ಕಂಪನಿಯಲ್ಲಿ ಸಾಫ್ಟ್‌ವೇರ್ ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಿದ್ದಾರೆ.

ಗ್ರಾಮೀಣ ಭಾಗದಲ್ಲಿ ಸಮಾಜ ಸೇವೆ ಮಾಡುವ ತುಡಿತ ಇಟ್ಟುಕೊಂಡಿರುವ ಸ್ವಾತಿ ತಂದೆಯನ್ನು ಹಾಗೂ ಗ್ರಾಮವನ್ನು ನೋಡಲು ಪ್ರತಿ ವರ್ಷ ರಜೆ ಹಾಕಿ ಗ್ರಾಮಕ್ಕೆ ಬರುತ್ತಿದ್ದರು.

ಅದರಲ್ಲೂ ಜಗಳೂರು ತಾಲೂಕು ಎಂದರೆ ಅತ್ಯಂತ ಹಿಂದುಳಿದ ತಾಲೂಕುಗಳಲ್ಲಿ ಒಂದು. ಸರಿಯಾಗಿ ಮಳೆ ಬೆಳೆ ಇಲ್ಲದೆ ಇಲ್ಲಿನ ಬಡ ಜನರಿಗೆ ಸರಿಯಾಗಿ ಉದ್ಯೋಗ ಸಿಗದೆ ಕಷ್ಟದ ಜೀವನ ನಡೆಸುತ್ತಿದ್ದಾರೆ. ಹೀಗಾಗಿ ಹಳ್ಳಿಗಾಡಿನಲ್ಲಿ ಮೂಲ ಸೌಲಭ್ಯಗಳ ಕೊರತೆಯನ್ನು ಕಣ್ಣಾರೆ ಕಂಡಿದ್ದರು. ಹೀಗಾಗಿ ಹಳ್ಳಿಗಳಲ್ಲೂ ಕನಿಷ್ಠ ಪ್ರಾಥಮಿಕ ಸೌಕರ್ಯಗಳನ್ನು ಕಲ್ಪಿಸುವ, ಹಳ್ಳಿಗಾಡಿನ ಜನರ ಜೀವನಮಟ್ಟವನ್ನು ಸುಧಾರಿಸುವ ಕನಸನ್ನು ಸ್ವಾತಿ ತಿಪ್ಪೇಸ್ವಾಮಿ ಕಂಡಿದ್ದರು.

ಗ್ರಾಮ ಪಂಚಾಯಿತಿಯಲ್ಲಿರುವ ಸೌಲಭ್ಯಗಳನ್ನು ಬಡವರಿಗೆ ದೊರಕುವಂತೆ ಮಾಡಿದರೆ ಸಾಕು, ಅಭಿವೃದ್ಧಿ ಸಾಧ್ಯ ಎನ್ನುವ ಧ್ಯೇಯವನ್ನು ಇಟ್ಟುಕೊಂಡಿದ್ದ ಸ್ವಾತಿಯವರು, ಪಂಚಾಯಿತಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಚುನಾವಣೆಗೂ ಸ್ಪರ್ಧಿಸಿದರು. ಉನ್ನತ ಶಿಕ್ಷಣ ಪಡೆದ ಸ್ವಾತಿ, ತಾಲೂಕಿನಲ್ಲೇ ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಅಲ್ಲದೆ ಸೊಕ್ಕೆ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಯಿತು. ಹೀಗಾಗಿ ವಿದ್ಯಾವಂತೆಯಾಗಿರುವ ಸ್ವಾತಿ ತಿಪ್ಪೇಸ್ವಾಮಿ ಅಧ್ಯಕ್ಷೆಯಾಗಿ ಸಹ ಆಯ್ಕೆಯಾಗಿದ್ದಾರೆ.

Share This Article
Leave a comment