ಶ್ರೀನಗರ: ಕೋವಿಡ್ ಮಹಾಮಾರಿಯ ನಂತರ ಹೊಸ ಹೊಸ ವೈರಸ್‌ಗಳು ಆತಂಕ ಸೃಷ್ಟಿಸುತ್ತಿದ್ದು, ಇದೀಗ ವಿಚಿತ್ರ ಕಾಯಿಲೆ ಒಂದೇ ತಿಂಗಳಲ್ಲಿ 15 ಜನರನ್ನು ಬಲಿತೆಗೆದುಕೊಂಡಿರುವ ಘಟನೆ ಜಮ್ಮು-ಕಾಶ್ಮೀರದಲ್ಲಿ ವರದಿಯಾಗಿದೆ.
ಇದೀಗ 9 ವರ್ಷದ ಬಾಲಕಿ ಜಬಿನಾ ಈ ಕಾಯಿಲೆಗೆ ಬಲಿಯಾಗಿದ್ದು, ಕಳೆದ ಒಂದು ತಿಂಗಳಲ್ಲಿ ಇಂತಹ ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ.
ಜಮ್ಮುವಿನ ರಜೌರಿ ಜಿಲ್ಲೆಯಲ್ಲಿ ಈ ನಿಗೂಢ ಕಾಯಿಲೆ ಜನರ ಮೇಲೆ ಹಾವಳಿ ಮಾಡುತ್ತಿದೆ. ಇದೀಗ ಸಾವಿಗೀಡಾದ ಬಾಲಕಿಯ ಸಹೋದರ ಮತ್ತು ಅಜ್ಜ ಕೂಡ ನಾಲ್ಕು ದಿನಗಳ ಹಿಂದೆ ಇದೇ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸಾವಿನ ಪ್ರಕರಣವನ್ನು ತನಿಖೆಗೊಳಪಡಿಸಲು ಸರ್ಕಾರ ವಿಶೇಷ ತನಿಖಾ ತಂಡ (ಎಸ್‌ಐಟಿ) ರಚನೆ ಮಾಡಿದ್ದು, ಪ್ರಕರಣದ ತನಿಖೆ ಆರಂಭವಾಗಿದೆ.ಇದನ್ನು ಓದಿ –ಆಕಸ್ಮಿಕ ಗುಂಡು ಸಿಡಿದು ವ್ಯಕ್ತಿ ಸಾವು
ಜಮ್ಮು-ಕಾಶ್ಮೀರ ಆರೋಗ್ಯ ಸಚಿವ ಸಕೀನಾ ಮಸೂದ್ ಅವರು, ಬಾಧಲ್ ಗ್ರಾಮದಲ್ಲಿ 15 ಜನರ ಸಾವಿಗೆ ಯಾವುದೇ ನಿಗೂಢ ಕಾಯಿಲೆ ಕಾರಣವಲ್ಲ ಎಂದು ಹೇಳಿಕೆ ನೀಡಿದ್ದಾರೆ. ಜಿಲ್ಲೆಯಲ್ಲಿ ಯಾವುದೇ ವೈರಸ್ ಅಥವಾ ರೋಗದ ಪ್ರಭಾವವಿಲ್ಲದಿದ್ದರೂ, ಸಾವಿನ ನಿಖರ ಕಾರಣ ತನಿಖೆ ಬಳಿಕ ಮಾತ್ರ ತಿಳಿಯಬಹುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
More Stories
ಖಾಸಗಿ ವಾಹನಗಳಿಗೆ ಮಾಸಿಕ ಮತ್ತು ವಾರ್ಷಿಕ ಟೋಲ್ ಪಾಸ್ ಪರಿಚಯಿಸಲು ಸರ್ಕಾರ ತೀರ್ಮಾನ
ಬೆಂಗಳೂರಿನಲ್ಲಿ ಜನವರಿ 17ರಿಂದ ಯುಎಸ್ ಕಾನ್ಸುಲೇಟ್ ಕಚೇರಿ ಕಾರ್ಯಾರಂಭ
ಆಕಸ್ಮಿಕ ಗುಂಡು ಸಿಡಿದು ವ್ಯಕ್ತಿ ಸಾವು