ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಕೊಲೆಯಾಗಿದ್ದಾರೆ ಎಂದು ಹೇಳುವ ಮೂಲಕ ಸುಶಾಂತ್ ಸಿಂಗ್‌ರ ವಕೀಲರಾದ ವಿಕಾಸ್ ಸಿಂಗ್ ದಿಗ್ಭ್ರಮೆ ಮೂಡಿಸಿದ್ದಾರೆ.
ಸುಶಾಂತ್ ಸಿಂಗ್‌ರ ಸಾವಿನ ತನಿಖೆಯನ್ನು ಸರ್ಕಾರ ಸಿಬಿಐ ಅವರಿಗೆ ಒಪ್ಪಿಸಿತ್ತು. ಪೋಲೀಸರು ತನಿಖಾ ಪ್ರಕ್ರಿಯೆಯನ್ನು ನಿಧಾನ ಮಾಡುತ್ತಿದ್ದಾರೆಂದು ಆರೋಪಿಸಿದ್ದಾಗ ಪ್ರಕರಣವು ಸಿಬಿಐಗೆ ವರ್ಗಾಯಿಸಲಾಗಿತ್ತು. ಈಗ ಸಿಬಿಐ ಕೂಡ ತನಿಖೆಯನ್ನು ನಿಧಾನಗತಿಗೊಳಿಸಿರುವದರಿಂದ ಸುಶಾಂತ್‌ರ ಪೋಷಕರು ನಿರಾಸೆಗೊಳಗಾಗಿದ್ದಾರೆ.
ಸುಶಾಂತ್‌ರ ಸಾವಿನ ತನಿಖೆ ನಿಧಾನಗೊಂಡಿರುವ ಸಂಬಂಧ ಅವರ ವಕೀಲ ವಿಕಾಸ್ ಸಿಂಗ್ ಕೂಡ ಆಕ್ರೋಶಗೊಂಡಿದ್ದು ‘ಸುಶಾಂತ್ ಅವರದ್ದು ಶೇ 200 ರಷ್ಟು ಕೊಲೆ’ ಎಂದಿದ್ದಾರೆ. ಸುಶಾಂತ್ ಸಾವನ್ನಪ್ಪಿದ್ದ ದಿನ ಅವರ ಕೆಲವು ಫೋಟೋಗಳನ್ನು ಸುಶಾಂತ್ ಅವರ ಸಹೋದರಿ ಮೀತೂ ಸಿಂಗ್ ತೆಗೆದುಕೊಂಡಿದ್ದರು. ಅವುಗಳನ್ನು ವಿಕಾಸ್ ಏಮ್ಸ್ ಆಸ್ಪತ್ರೆಯ ವೈದ್ಯರಿಗೆ ಕಳುಹಿಸಿದ್ದಾರೆ. ಅವರು ಫೋಟೋಗಳನ್ನು ಪರಿಶೀಲಿಸಿ ಇದು ಖಚಿತವಾಗಿ ಕತ್ತು ಹಿಸುಕಿರುವುದರ ಮೂಲಕ ಆಗಿರುವ ಸಾವು ಎಂದು ಮಾಹಿತಿಯನ್ನು ನೀಡಿದ್ದಾರೆ.
ಇದೇ ಸ್ಪೋಟಕ ಮಾಹಿತಿಯನ್ನು ವಿಕಾಸ್ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೇ ಇದುವರೆಗೂ ಏಮ್ಸ್ ಆಸ್ಪತ್ರೆಯವರು ಸುಶಾಂತ್‌ರ ಮೃತದೇಹದ ಫೊರೆನ್ಸಿಕ್ ವರದಿಗಳನ್ನು ನೀಡಿಲ್ಲ. ಸಿಬಿಐ ಏಮ್ಸ್ ಆಸ್ಪತ್ರೆಯ ವೈದ್ಯರನ್ನೂ ಸಹ ಭೇಟಿಯಾಗಿಲ್ಲ ಎಂದು ಬರೆದುಕೊಂಡಿದ್ದಾರೆ.
More Stories
ಸಂಸತ್ ಭವನದ ಬಳಿಯ ದಾರುಣ ಘಟನೆ: ವ್ಯಕ್ತಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ
ಸಿದ್ದರಾಮಯ್ಯ ಹೆಸರನ್ನು ರಸ್ತೆಗೆ ಇಟ್ಟರೆ ತಪ್ಪೇನು? – ಸಿಎಂ ಪರ ನಿಂತುಕೊಂಡ ಪ್ರತಾಪ್ ಸಿಂಹ
ಅಫ್ಘಾನಿಸ್ತಾನದ ಮೇಲೆ ಪಾಕಿಸ್ತಾನದ ಏರ್ಸ್ಟ್ರೈಕ್: 15 ಮಂದಿ ಮೃತ್ಯು