ದಕ್ಷಿಣ ಕನ್ನಡ :ಭಾರತೀಯ ಕ್ರಿಕೆಟ್ ತಂಡದ ಖ್ಯಾತ ಬ್ಯಾಟರ್ ಸೂರ್ಯಕುಮಾರ್ ಯಾದವ್, ತಮ್ಮ ಪತ್ನಿ ಸಮೇತ ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ಧ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ.
ಸೂರ್ಯಕುಮಾರ್ ಅವರು ಆಶ್ಲೇಷ ಬಲಿ ಪೂಜೆ, ಮಹಾಪೂಜೆ, ಮತ್ತು ಅಭಿಷೇಕ ನೆರವೇರಿಸಿದ್ದು , ದಂಪತಿಗೆ ದೇವಸ್ಥಾನದ ವತಿಯಿಂದ ವಿಶೇಷ ಗೌರವಾರ್ಪಣೆ ಮಾಡಲಾಯಿತು.
ತೀರ್ಥ ಕ್ಷೇತ್ರದ ಮಹತ್ವ:
ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ನಾಗರಾಧನೆಗೆ ಪ್ರಸಿದ್ಧವಾಗಿದ್ದು, ದೇಶದ ವಿವಿಧ ಭಾಗಗಳಿಂದ ಭಕ್ತರನ್ನು ಆಕರ್ಷಿಸುತ್ತದೆ. ಜನಪ್ರಿಯ ಕ್ರಿಕೆಟರ್ ಆಗಿರುವ ಸೂರ್ಯಕುಮಾರ್ ಯಾದವ್ ಈ ತೀರ್ಥ ಕ್ಷೇತ್ರಕ್ಕೆ ಭೇಟಿ ನೀಡಿದ್ದು, ಸ್ಥಳೀಯ ಭಕ್ತರ ಗಮನ ಸೆಳೆದಿದೆ.ಇದನ್ನು ಓದಿ -ಉಪಚುನಾವಣಾ ಫಲಿತಾಂಶಕ್ಕೂ ಮುನ್ನ ಸಿಪಿ ಯೋಗೇಶ್ವರ್ ವಿರುದ್ಧ ಮಗನ ದೂರು: ನಕಲಿ ಸಹಿ ಆರೋಪ
ಈ ಭೇಟಿ ಕ್ರಿಕೆಟ್ ಅಭಿಮಾನಿಗಳಿಗೂ, ಭಕ್ತರಿಗೂ ವಿಶೇಷ ಸಂಭ್ರಮ ತಂದಿದೆ.
More Stories
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ
ಮಂಡ್ಯದಲ್ಲಿ ಭೀಕರ ಅಪಘಾತ: ಕಾರು-ಲಾರಿ ಡಿಕ್ಕಿಯಾಗಿ ಮೂವರು ವಿದ್ಯಾರ್ಥಿ ಸಾವು
ನೆಲಮಂಗಲ ಟೀ ಬೇಗೂರು ಬಳಿ ಭೀಕರ ಸರಣಿ ಅಪಘಾತ: ಒಂದೇ ಕುಟುಂಬದ 6 ಮಂದಿ ಸಾವು