January 10, 2025

Newsnap Kannada

The World at your finger tips!

surya punith

ಪುನೀತ್​ ಸಮಾಧಿ ದರ್ಶನ ಪಡೆದು ಕಣ್ಣೀರಿಟ್ಟ ತಮಿಳು ನಟ ಸೂರ್ಯ

Spread the love

ತಮಿಳು ಸ್ಟಾರ್ ನಟ ಸೂರ್ಯ ಅವರು ಶಿವಣ್ಣನ ಜೊತೆ ಕಠೀರವ ಸ್ಟುಡಿಯೋಗೆ ಶುಕ್ರವಾರ ಭೇಟಿ ನೀಡಿ ಪುನೀತ್ ರಾಜ್​​ಕುಮಾರ್ ಸಮಾಧಿ ದರ್ಶನ ಪಡೆದು ಕಣ್ಣಿರಿಟ್ಟಿದ್ದಾರೆ.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸೂರ್ಯ ಅವರು, ಅಪ್ಪು ಅಗಲಿಕೆ ಸಹಿಸಲಾಗದು. ಅಣ್ಣಾವ್ರ ಕುಟುಂಬದೊಂದಿಗೆ ನಮ್ಮ ಕುಟುಂಬವು ತುಂಬಾ ಒಡನಾಟವಿತ್ತು. ಅಣ್ಣಾವ್ರು ನನಗೆ ಮಾದರಿಯಾಗಿದ್ದರು. ನಾನು ನನ್ನ ತಾಯಿ ಹೊಟ್ಟೆಯಲ್ಲಿ 4 ತಿಂಗಳು ಇದ್ದಾಗ ಅಪ್ಪುಗೆ 7 ತಿಂಗಳು. ಪುನೀತ್ ಅಗಲಿಕೆಯಿಂದ ನಮ್ಮ ಕುಟುಂಬಕ್ಕೂ ನೋವಾಗಿದೆ ಎಂದರು

ನಮ್ಮ ತಂದೆ ತಾಯಿ ಇನ್ನು ಆ ನೋವಿನಿಂದ ಹೊರ ಬಂದಿಲ್ಲ. ನಮ್ಮ ಹೃದಯಗಳಲ್ಲಿ ಅಪ್ಪು ಯಾವಾಗಲೂ ನಗುತ್ತಲೇ ಇರ್ತಾರೆ ಎಂದು ಸೂರ್ಯ ಭಾವುಕರಾಗಿ ಹೇಳಿದರು.

Copyright © All rights reserved Newsnap | Newsever by AF themes.
error: Content is protected !!