ಮೈಸೂರು ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕರು ಹಾಗೂ ಪದನಿಮಿತ್ರ ಭೂದಾಖಲೆಗಳ ಉಪ-ನಿರ್ದೇಶಕರ ನ್ಯಾಯಾಲಯ (ಡಿ.ಡಿ.ಎಲ್.ಆರ್) ಸರ್ವೇಯರ್ ಮಂಜುನಾಥ್ ಎಂಬುವವರು 35 ಸಾವಿರ ರು ಲಂಚ ಸ್ವೀಕರಿಸುವಾಗ ACB ಪೋಲಿಸರು ಟ್ರ್ಯಾಪ್ ಮಾಡಿ, ನಂತರ ಬಂಧಿಸಿದ್ದಾರೆ.
ಸರ್ವೇಯರ್ ಮಂಜುನಾಥ್ ಎಂಬುವವರು 35 ಸಾವಿರ ರು ಲಂಚ ಸ್ವೀಕರಿಸುವ ಮುನ್ನ ಎಸಿಬಿ ಬಲೆಗೆ ಬಿದ್ದಿದ್ದಾರೆ
ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲ್ಲೂಕು ರಾವಂದೂರು ಹೋಬಳಿ ಹೆಮ್ಮಿಗೆ ಗ್ರಾಮದ
ವಾಸಿಯೋರ್ವರರು (ಪಿರ್ಯಾದುದಾರರು) ಬಾಬ್ತು ಅದೇ ಗ್ರಾಮದ ಸರ್ವೆ ನಂ-60/ ಮತ್ತು 60/2 ರ ಜಮೀನಿನ
ಹಳೆಯ ಪೋಡಿಯನ್ನು ರದ್ದುಪಡಿಸಿ, ಅನುಭವದಂತೆ ಪೋಡಿ ಮಾಡಿಕೊಡಲು ಜಿಲ್ಲಾಧಿಕಾರಿಗಳ ತಾಂತ್ರಿಕ
ಸಹಾಯಕರು ಹಾಗೂ ಪದನಿಮಿತ್ತ ಭೂದಾಖಲೆಗಳ ಉಪ-ನಿರ್ದೇಶಕರ ನ್ಯಾಯಾಲಯ, ಮೈಸೂರು ರವರ ಕಚೇರಿಗೆ ಅರ್ಜಿ ಸಲ್ಲಿಸಿದ್ದರು
ಸರ್ವೇಯರ್ ಮಂಜುನಾಥ್ 19-07-2022, 25-07-2022 ರ 35,000/- ರು ಲಂಚದ ಹಣ ಕೊಡುವಂತೆ ಬೇಡಿಕೆ ಇಟ್ಟು, ಒತ್ತಾಯಿಸಿದ್ದಾರೆ.ಇಂದು ನಡೆದ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಆರೋಪಿತ ಸರ್ಕಾರಿ ಅಧಿಕಾರಿ ಮ೦ಜುನಾಥ್.
ಮೈಸೂರು-ಬನ್ನೂರು ರಸ್ತೆಯಲ್ಲಿರುವ ಮೈಸೂರು ನಗರದ ರಕ್ಷಣಾ ಆಹಾರ ಕೇಂದ್ರದ ಬಳಿ
ಪಿರ್ಯಾದುದಾರರಿಂದ 35,000/- ರು ಲಂಚದ ಹಣವನ್ನು ಸ್ಟೀಕರಿಸುವಾಗ ಮೈಸೂರು ವಿಭಾಗದ ಎಸಿಬಿ ಎಸ್ಪಿ ಸಜಿತ್ ಮಾರ್ಗದರ್ಶನ ದಲ್ಲಿ ಎ.ಸಿ.ಬಿ ಪೊಲೀಸ್ ಠಾಣೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ನಡೆಸಿದ ಟ್ರ್ಯಾಪ್ ಕಾರ್ಯಾಚರಣೆಯಲ್ಲಿ ಆರೋಪಿ ಮಂಜುನಾಥ್ ಸಿಕ್ಕಿ ಬಿದ್ದ ನಂತರ ದಸ್ತಗಿರಿ ಮಾಡಿದ ಲಂಚದ ಹಣವನ್ನು ವಶಪಡಿಸಿಕೊಳ್ಳಲಾಗಿದೆ ಪ್ರಕಟಣೆ ತಿಳಿಸಿದರು.
- ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್
- ಕೊಡಗಿನಲ್ಲಿ ನಿರ್ಮಾಣಗೊಳ್ಳಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
- KSRTC ಬಸ್-ಲಾರಿ ನಡುವೆ ಡಿಕ್ಕಿ: ಐವರು ಸ್ಥಳದಲ್ಲೇ ಸಾವು
- ವರದಕ್ಷಿಣೆ ಕಿರುಕುಳ ತಾಳಲಾರದೇ ಮಹಿಳೆ ಆತ್ಮಹತ್ಯೆ – ಪತಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ
- ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
More Stories
ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್
KSRTC ಬಸ್-ಲಾರಿ ನಡುವೆ ಡಿಕ್ಕಿ: ಐವರು ಸ್ಥಳದಲ್ಲೇ ಸಾವು
ಮೈಸೂರು ಜೈಲಿನಲ್ಲಿ ಮೂವರು ಕೈದಿಗಳ ದುರ್ಮರಣ