December 24, 2024

Newsnap Kannada

The World at your finger tips!

1 1

ಸುರತ್ಕಲ್ ಫಾಜಿಲ್ ಹತ್ಯೆ: 14 ಮಂದಿ ಶಂಕಿತರು ವಶಕ್ಕೆ : ಮಂಗಳೂರು ಕಮೀಷನರ್

Spread the love

ಮಂಗಳೂರಿನ ಸುರತ್ಕಲ್‌ನ ಯುವಕ ಫಾಜೀಲ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ 14 ಮಂದಿ ಶಂಕಿತರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಈ ವಿಷಯವನ್ನು ಸುದ್ದಿಗಾರರಿಗೆ ತಿಳಿಸಿದ ಮಂಗಳೂರು ಪೊಲೀಸ್‌ ಕಮಿಷನರ್‌ ಶಶಿಕುಮಾರ್
ಈಘಟನೆ ಸಂಬಂಧ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, 2 ಪ್ರತ್ಯೇಕ ತಂಡಗಳಿಂದ ತನಿಖೆ ಮುಂದುವರೆದಿದೆ. ಪ್ರಕರಣವನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ, ಶಾಂತಿ ಸುವ್ಯವಸ್ಥೆ ಕಾಪಾಡಲು 144 ಸೆಕ್ಷನ್ ಜಾರಿ ಮಾಡಲಾಗಿದೆ. ಶೀಘ್ರವೇ ಆರೋಪಿಗಳನ್ನು ಪತ್ತೆ ಮಾಡಲಾಗುವುದು ಎಂದು ತಿಳಿಸಿದರು.

ಹತ್ಯೆಯ ಕಾರಣ ಏನು..? ಯಾವ ಕಾರಣಕ್ಕೆ ಕೊಲೆ ಆಗಿದೆ..? ಎಂಬ ಬಗ್ಗೆ ಸ್ಪಷ್ಟವಾಗಿ ಹೇಳುವ ಹಂತಕ್ಕೆ ನಮ್ಮ ತನಿಖೆ ಬಂದಿಲ್ಲ ಎಂದರು.

ಶಾಂತಿ ಕಾಪಾಡುವ ಉದ್ದೇಶದಿಂದ ಬೀಗಿ ಕ್ರಮಕೈಗೊಳ್ಳಲಾಗಿದೆ. ಪ್ರಕರಣದಲ್ಲಿ ಬೇರೆ ಬೇರೆ ಪೊಲೀಸ್​ ಠಾಣೆಗಳಲ್ಲಿ  13 ರಿಂದ 14 ಮಂದಿಯನ್ನು ಶಂಕೆ ಆಧಾರದ ಮೇಲೆ ವಶಕ್ಕೆ ಪಡೆದುಕೊಂಡಿದ್ದೇವೆ.

ಸಾಮಾಜಿಕ ಜಾಲತಾಣದಲ್ಲಿ ಬೇರೆ ಬೇರೆ ದೇಶಗಳಲ್ಲಿ ಕುಳಿತುಕೊಂಡು, ಫೇಕ್​ ಖಾತೆಗಳಲ್ಲಿ ಪ್ರಚೋದನಕಾರಿ ಪೋಸ್ಟ್​ ಹಾಕೋದನ್ನು ನಿಲ್ಲಿಸಿ. ಇಂದು ಸಂಪೂರ್ಣವಾಗಿ ಮದ್ಯ ನಿಷೇಧ ಮಾಡಿದ್ದೇವೆ.

ರಾತ್ರಿ ವೇಳೆ ಅನಗತ್ಯವಾಗಿ ಓಡಾಡೋದನ್ನು ನಿಲ್ಲಿಸಿ. ನಿಷೇಧಾಜ್ಞೆ ನಾಳೆ ಬೆಳಗ್ಗೆ 10 ಗಂಟೆವರೆಗೂ ಮುಂದುವರಿಯಲಿದೆ. 4 ಪೊಲೀಸ್​ ಠಾಣೆಯ ವ್ಯಾಪ್ತಿಯಲ್ಲಿ ಪೊಲೀಸ್​ ಇಲಾಖೆ ಮನವಿ ಮೇರೆಗೆ ಜಿಲ್ಲಾಡಳಿತ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ ಎಂದರು.

Copyright © All rights reserved Newsnap | Newsever by AF themes.
error: Content is protected !!