December 31, 2024

Newsnap Kannada

The World at your finger tips!

gowda

27 ಹುಡುಗಿಯರಿಗೆ ವಂಚಿಸಿ ಜೈಲು ಪಾಲಾದ ಸುರ ಸುಂದರ!

Spread the love

ಇವನು ದೊಡ್ಡ ವಿಲನ್ . ಇವನ ಖಯಾಲಿ ಎಂದರೆ ಹುಡುಗಿಯರಿಗೆ ಮೋಸ ಮಾಡುವುದು. ಬೆಂಗಳೂರಿನಲ್ಲಿ ಈತ ಫುಡ್ ಡಿಲೆವರಿ ಬಾಯ್ . ಇದು ಉಪಕಸಬು. ಹುಡುಗಿಯರನ್ನು ಪರಿಚಯ ಮಾಡಿಕೊಂಡು ತನ್ನ ಆಸೆ ತೀರಿಸಿಕೊಂಡು ಕೈ ಎತ್ತುವುದೇ ಈತನ ಮೇನ್ ವೃತ್ತಿ.

ಹಾಗಂತ ಬರೋಬರಿ 27 ಹುಡುಗಿಯರಿಗೆ ಮೋಸ ಮಾಡಿದ್ದಾನೆ. ಅಂದ ಹಾಗೆ ಈತ ಮಂಡ್ಯ ಜಿಲ್ಲೆಯ ಮಳವಳ್ಳಿಯ ಸಾಗರ್ ಗೌಡ ಎಂಬ ವಿಷಯಲಂಪಟ.

ಹುಡುಗಿಯರನ್ನು ಪಟಾಯಿಸುವುದು, ಅವರೊಡನೆ ಸಂಪರ್ಕ ಬೆಳೆಸಿ ಕೈ ಕೊಟ್ಟು ಮತ್ತೊಂದು ಹುಡುಗಿಗೆ ಗಾಳ ಹಾಕುವುದು ಇವನಿಗೆ ಸಲೀಸು ಕೆಲಸವಂತೆ.

ನೋಡಲು ಹ್ಯಾಂಡ್ ಸಮ್ ಆಗಿರುವ ಸಾಗರ್ ಗೌಡ ಯುವತಿಯೊಬ್ಬಳಿಗೆ ಕೆಲಸ ಕೊಡಿಸುವ ಆಮಿಷವೊಡ್ಡಿದ್ದಾನೆ. ಸಂಬಂಧಿಕರ ಮನೆಗೆ ಕರೆದೊಯ್ದು ಅಲ್ಲಿ ಕೇಕ್ ಗೆ ನಶೆ ಬರುವ ರಾಸಾಯನಿಕ ಬೆರೆಸಿ ತಿನ್ನಿಸಿದ್ದಾನೆ. ಆಕೆಯ ಮೇಲೆ ಅತ್ಯಾಚಾರ ಎಸಗಿ ಅಶ್ಲೀಲ ವಿಡಿಯೊ ತೆಗೆದು ಕೊಂಡು ಆ ಯುವತಿಗೆ ಬ್ಲ್ಯಾಕ್ ಮೇಲ್ ಮಾಡಿದ್ದಾನೆ. ಪೊಲೀಸರಿಗೆ ದೂರು ಕೊಡುತ್ತೇನೆ ಎಂದಾಗ ಮದುವೆ ಆಗುವ ನಾಟಕವಾಡಿದ್ದಾನೆ.

ಈ ಸಾಗರ್ ಈ ವೇಳೆಗೆ ಮತ್ತೊಬ್ಬಳಿಗೆ ಗಾಳ ಹಾಕುವ ವಿಷಯ ಅರಿತ ಆಯುವತಿ ನೇರವಾಗಿ
ಸಾಗರ್ ಗೌಡನ ಊರಿಗೆ ಹೋಗಿದ್ದಾಳೆ.

ಅಪ್ಪ – ಅಮ್ಮ ಉತ್ತರ ಕೇಳಿ ದಂಗಾದ ಯುವತಿ:

ನಿಮ್ಮ ಮಗ ಏನೆಲ್ಲಾ ಆಟ ಆಡಿದ್ದಾನೆ. ಅತನೊಂದಿಗೆ ಮದುವೆ ಮಾಡಿಸುವಂತೆ
ಪೋಷಕರನ್ನು ಭೇಟಿ ಮಾಡಿ ಕೇಳಿದ್ದಾಳೆ.

ಈ ತನಕ ನನ್ನ ಮಗ 26 ಹುಡುಗಿಯರಿಗೆ ನಿನ್ನ ಹಾಗೆ ಮೋಸ ಮಾಡಿದ್ದಾನೆ. ಅವರಿಗೆಲ್ಲಾ ಮೊದಲು ನ್ಯಾಯ ಕೊಡಿಸು, ಆಮೇಲೆ ನಿನಗೆ ಮದುವೆ ಮಾಡಿಸುತ್ತೇವೆ” ಎಂದು ಉಡಾಫೆಯ ಉತ್ತರ ಕೊಟ್ಟಿದ್ದಾರೆ ಆಕೆ ಅಪ್ಪ -ಅಮ್ಮ.

ಪೋಷಕರ ಉತ್ತರಕ್ಕೆ ದಂಗಾದ ಯುವತಿ ಅಲ್ಲಿ ತನಗೆ ನ್ಯಾಯ ಸಿಗುವುದಿಲ್ಲ ಎಂದು ಭಾವಿಸಿ ನೇರವಾಗಿ ಬೆಂಗಳೂರಿನ ಚಂದ್ರ ಲೇ ಔಟ್ ಪೊಲೀಸರಿಗೆ ದೂರು ನೀಡಿದ್ದಾಳೆ.

ಪೊಲೀಸರು ಸಾಗರ್ ಗೌಡನನ್ನು ವಶಕ್ಕೆ ತೆಗೆದುಕೊಂಡು ಡ್ರಿಲ್ ಮಾಡಿದಾಗ ಸಾಗರ್ ಗೌಡ 26 ಹುಡುಗಿಯರಿಗೆ ಮೋಸ ಮಾಡಿರುವುದು ಬೆಳಕಿಗೆ ಬಂದಿದೆ.

ಆತ 26 ಹುಡುಗಿಯರಿಗೆ ಮೋಸ ಮಾಡಿರುವುದು ವಿಚಾರಾಣೆಯಿಂದ ಸಾಬೀತಾಗಿದೆ. ಸಾಗರ್ ಗೌಡ ಪರಪ್ಪನ ಅಗ್ರಹಾರದಲ್ಲಿ ಜೈಲು ಸೇರಿದ್ದಾನೆ.

Copyright © All rights reserved Newsnap | Newsever by AF themes.
error: Content is protected !!