December 31, 2024

Newsnap Kannada

The World at your finger tips!

ragini

ನಟಿ ರಾಗಿಣಿ ಜಾಮೀನು ಅರ್ಜಿ ವಿಚಾರಣೆ ಮುಂದೂಡಿದ ಸುಪ್ರೀಂ:ಸಧ್ಯಕ್ಕೆ ಸೆರೆವಾಸವೇ ಗತಿ

Spread the love

ಸ್ಯಾಂಡಲ್ ವುಡ್ ನಟಿ‌ ರಾಗಿಣಿ ದ್ವಿವೇದಿ ಸಲ್ಲಿಸಿದ್ದ ಜಾಮೀನು ಅರ್ಜಿ ವಿಚಾರಣೆ ನಡೆಸಿದ‌‌ ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮುಂದೂಡಿದೆ.

ಡ್ರಗ್ಸ್ ಮಾರಾಟ ಜಾಲದ ಪ್ರಕರಣದಲ್ಲಿ ಆರೋಪ ಹೊತ್ತು ಸೆಪ್ಟೆಂಬರ್ 3 ರಿಂದಲೇ ಜೈಲುವಾಸ ಅನುಭವಿಸುತ್ತಿ ರುವ ರಾಗಿಣಿ ಜಾಮೀನಿಗಾಗಿ ಸಾಕಷ್ಟು ಹೋರಾಟ ಮಾಡುತ್ತಿದ್ದಾರೆ.

ಈ ನಡುವೆ ಹೈಕೋರ್ಟಿನಲ್ಲಿ ಜಾಮೀನು ಅರ್ಜಿ ವಜಾಗೊಂಡ ಮೇಲೆ ರಾಗಿಣಿ ಜಾಮೀನಿಗಾಗಿ ಸುಪ್ರೀಂ ಮೊರೆ ಹೋಗಿದ್ದರು.

ಸುಪ್ರೀಂ ಕೋರ್ಟ್ ನ ತ್ರಿಸದಸ್ಯ‌ ನ್ಯಾಯಾಧೀಶ ರಾದ ನಾಗೇಶ್ವರ ರಾವ್ ನವೀನ್ ಸಿಹ್ನಾ, ಇಂದು ಮಲ್ಹೋತ್ರಾ ಅವರನ್ನು ಒಳಗೊಂಡ ಪೀಠ ರಾಗಿಣಿ ಜಾಮೀನು ಅರ್ಜಿಯನ್ನು ವಿಚಾರಣೆಗೆ ಕೈಗೆತ್ತಿಕೊಂಡರು.

ಸುಪ್ರೀಂ ಕೋರ್ಟ್ ಜಾಮೀನು ವಿಚಾರವಾಗಿ ಯಾವುದೇ ನಿರ್ದಿಷ್ಟ ತೀರ್ಮಾನ ಹೇಳದೇ ಇರುವುದರಿಂದ ಸಧ್ಯಕ್ಕೆ ರಾಗಿಣಿಗೆ ಜೈಲೇ ಗತಿ‌ ಎಂದು ಹೇಳಬಹುದು. ಅನಾರೋಗ್ಯ ಕಾರಣದಿಂದ ಸಂಜನಾಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವುದನ್ನು ಸ್ಮರಿಸಬಹುದು.

Copyright © All rights reserved Newsnap | Newsever by AF themes.
error: Content is protected !!