January 11, 2025

Newsnap Kannada

The World at your finger tips!

sunanda pal

ಮೈಸೂರು ಪಾಲಿಕೆಯಲ್ಲಿ ಮೊದಲ ಬಾರಿಗೆ ಬಿಜೆಪಿ ಮುಡಿಗೆ ಮೇಯರ್ ಕಿರೀಟ – ಸುನಂದಾ ಪಾಲನೇತ್ರ ಆಯ್ಕೆ

Spread the love

ಮೈಸೂರು ಪಾಲಿಕೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಿಜೆಪಿ ಮೇಯರ್ ಕಿರೀಟವನ್ನು ಮುಡಿಗೇರಿಸಿಕೊಂಡಿದೆ.

sunanda2

ಮೈಸೂರು ಮಾಹಾನಗರ ಪಾಲಿಕೆ ನೂತನ ಮೇಯರ್ ಆಗಿ ಬಿಜೆಪಿ ಸದಸ್ಯೆ ಸುನಂದಾ ಪಾಲನೇತ್ರ ಆಯ್ಕೆಯಾಗಿದ್ದಾರೆ. ಸುನಂದಾ ಪಾಲನೇತ್ರ ಬಿ.ಎಸ್ ಯಡಿಯೂರಪ್ಪ ಸಂಬಂಧಿಯೂ ಆಗಿದ್ದಾರೆ.

ಮೈಸೂರು ಪಾಲಿಕೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೇಯರ್ ಸ್ಥಾನ ಬಿಜೆಪಿಗೆ ಲಭಿಸಿದೆ. ಚುನಾವಣೆಯಲ್ಲಿ ತಮ್ಮ ಪಕ್ಷದ ಅಭ್ಯರ್ಥಿ ಪರ‌ ಮತದಾನ ಮಾಡಿದ ಕಾಂಗ್ರೆಸ್​ ಸದಸ್ಯರು ಬಳಿಕ ಸಭಾ ತ್ಯಾಗ ಮಾಡಿ, ಜೆಡಿಎಸ್​​ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ದೂರಿದರು.

ಪಾಲಿಕೆ ಮೇಯರ್ ಚುನಾವಣೆಗೆ ಬುಧವಾರ ಬೆಳಗ್ಗೆ ಮೂರು ಪಕ್ಷದ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದರು.

ಕಾಂಗ್ರೆಸ್​ ಅಭ್ಯರ್ಥಿಯಾಗಿ 32ನೇ ವಾರ್ಡಿನ ಸದಸ್ಯೆ ಹೆಚ್.ಎಂ. ಶಾಂತಕುಮಾರಿ, ಜೆಡಿಎಸ್​​​ನಿಂದ 37ನೇ ವಾರ್ಡಿನ ಅಶ್ವಿನಿ ಆರ್ ಅನಂತು‌ ಹಾಗೂ ಬಿಜೆಪಿ ಅಭ್ಯರ್ಥಿಯಾಗಿ 59ನೇ ವಾರ್ಡ್ ನ ಸುನಂದಾ ಪಾಲನೇತ್ರ ನಾಮಪತ್ರ ಸಲ್ಲಿಕೆ ಮಾಡಿದ್ದರು.

ಮೂರು ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದ ಕಾರಣ ಚುನಾವಣೆ ತೀವ್ರ ಕುತೂಹಲ ಮೂಡಿಸಿತ್ತು.

ಕಾಂಗ್ರೆಸ್ ಬೆಂಬಲಿಸದ ಜೆಡಿಎಸ್ :

ಕಳೆದ ಬಾರಿ ಮೈತ್ರಿ ಮಾಡಿಕೊಂಡು ಅಧಿಕಾರ ಪಡೆದುಕೊಂಡಿದ್ದ ಕಾಂಗ್ರೆಸ್​, ಜೆಡಿಎಸ್​ಗಳ ಮೈತ್ರಿ ಮುರಿದು ಬಿದ್ದಿದ್ದು, ಕಾಂಗ್ರೆಸ್​​ ಸದಸ್ಯರ ಅಸಮಾಧಾನಕ್ಕೆ ಕಾರಣವಾಗಿದೆ. ಒಟ್ಟು 72 ಮತಗಳಲ್ಲಿ ಬಿಜೆಪಿ ಅಭ್ಯರ್ಥಿ ಸುನಂದಾ ಪಾಲನೇತ್ರ 25 ಮತ, ಕಾಂಗ್ರೆಸ್​​ನ ​ ಹೆಚ್.ಎಂ. ಶಾಂತಕುಮಾರಿ 20, ಜೆಡಿಎಸ್​​ ಪಕ್ಷದ ಅಶ್ವಿನಿ ಆರ್ ಅನಂತು‌ ಮತ 21 , ಇತರೆ 6 ಮತ ಪಡೆದುಕೊಂಡಿದ್ದಾರೆ.

Copyright © All rights reserved Newsnap | Newsever by AF themes.
error: Content is protected !!