January 9, 2025

Newsnap Kannada

The World at your finger tips!

WhatsApp Image 2022 01 19 at 4.30.39 PM

ಸಂಪ್ ಕ್ಲೀನಿಂಗ್​​ ವೇಳೆ ಕರೆಂಟ್​​ ಶಾಕ್​​​ : ನೀರಿನ ಸಂಪ್​ಗೆ ಬಿದ್ದು ತಂದೆ, ಮಗ ಸಾವು

Spread the love

ಬೆಂಗಳೂರಿನಲ್ಲಿ ನೀರಿನ ಸಂಪ್​ಗೆ ಬಿದ್ದು ತಂದೆ, ಮಗ ಸಾವನ್ನಪ್ಪಿರುವ ಘಟನೆ ನಡೆದಿದೆ.

ಆರ್.ಟಿ ನಗರದ ಸುಲ್ತಾನ್ ಪಾಳ್ಯ ಬಳಿ ಬುಧವಾರ ನಡೆದ ಈ ಘಟನೆಯಲ್ಲಿ ತಂದೆ ರಾಜು(36), ಪುತ್ರ ಸೈನತ್(10) ಸಾವೀಗೀಡಾಗಿದ್ದಾರೆ.

ರಾಮಕೃಷ್ಣ ಅಪಾರ್ಟ್​ಮೆಂಟ್​ನಲ್ಲಿ ಬೆಳಗ್ಗೆ ನಡೆದ ಘಟನೆಯಲ್ಲಿ ಸಂಪ್ ಕ್ಲೀನ್ ಮಾಡುವಾಗ ತಂದೆ ರಾಜುಗೆ ಕರೆಂಟ್ ಶಾಕ್ ಹೊಡೆದಿದೆ.

ಈ ಕೂಡಲೇ ನೋಡಿ ಭಯಗೊಂಡು ತಂದೆಯನ್ನು ಬಾಲಕ ಮುಟ್ಟಿದ್ದಾನೆ. ಈ ವೇಳೆ ಇಬ್ಬರಿಗೂ ಕರೆಂಟ್ ಶಾಕ್ ತಗುಲಿ ದುರ್ಮರಣ ಹೊಂದಿದ್ದಾರೆ.

ಶಾಕ್ ಹೊಡೆದ ರಭಸಕ್ಕೆ ಇಬ್ಬರೂ ಸಂಪ್​ಗೆ ಬಿದ್ದು ಸಾವನ್ನಪ್ಪಿದ್ದಾರೆ. ಕರೆಂಟ್​ ಶಾಕ್​​ ಹೊಡೆಯುತ್ತೇ ಅಂತಾ ಗೊತ್ತಿದ್ದರೂ ಬಲವಂತವಾಗಿ ನೀರಿನ ಸಂಪ್​ಗೆ ಇಳಿಸಿರುವ ಆರೋಪ ಕೇಳಿ ಬಂದಿದೆ.

Copyright © All rights reserved Newsnap | Newsever by AF themes.
error: Content is protected !!