January 29, 2026

Newsnap Kannada

The World at your finger tips!

Suresh Kumar

ಈ ಬಾರಿ‌ ಶಾಲಾ-ಕಾಲೇಜುಗಳಿಗೆ ಬೇಸಿಗೆ ರಜೆ ಬ್ರೇಕ್ – ಸಚಿವ ಸುರೇಶ್ ಕುಮಾರ್

Spread the love

ಈ ಬಾರಿ ಶಾಲಾ, ಕಾಲೇಜುಗಳಿಗೆ ಬೇಸಿಗೆ ರಜೆ ಇರುವುದಿಲ್ಲ.
ಶಾಲೆ, ಕಾಲೇಜು ವಿಳಂಬವಾಗಿ ಆರಂಭವಾಗಿರುವ ಹಿನ್ನೆಲೆಯಲ್ಲಿ ಬೇಸಿಗೆ ರಜೆ ಬಳಸಿಕೊಂಡು ಮೇ ತಿಂಗಳವರೆಗೆ ತರಗತಿಗಳನ್ನು ನಡೆಸಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಶಿವಮೊಗ್ಗದ ದುರ್ಗಿಗುಡಿ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ವೀಕ್ಷಣೆಯ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಸಚಿವರು, ಬೇಸಿಗೆ ರಜೆಯನ್ನು ಬಳಸಿಕೊಂಡು ಮೇ ವರೆಗೆ ಶಾಲೆಗಳನ್ನು ನಡೆಸುವ ಚಿಂತನೆ ಇದೆ. ಜೂನ್ ನಲ್ಲಿ ಎಸ್‌ಎಸ್‌ಎಲ್ಸಿ ಪರೀಕ್ಷೆಗಳು ನಡೆಯಲಿವೆ. ಈಗಾಗಲೇ ಸಾಕಷ್ಟು ರಜೆ ಬಳಕೆ ಮಾಡಿಕೊಳ್ಳಲಾಗಿದೆ.ಉಳಿದ ನಾಲ್ಕೂವರೆ ತಿಂಗಳು ಶಿಕ್ಷಕರ ಪಾಠದ ಕಡೆ ಗಮನಹರಿಸಬೇಕೆಂದು ವಿದ್ಯಾರ್ಥಿಗಳಿಗೆ ತಿಳಿಸಿದ್ದಾರೆ.

ಶಾಲಾ-ಕಾಲೇಜುಗಳು ಈ ಬಾರಿ ಕೊರೊನಾ ಕಾರಣದಿಂದ ತಡವಾಗಿ ಆರಂಭವಾಗಿವೆ . ಈ ಕಾರಣಕ್ಕಾಗಿ ಬೇಸಿಗೆ ರಜೆಕ್ಕೆ ಕಡಿವಾಣ ಹಾಕಲಾಗಿದೆ.

error: Content is protected !!