ಮಂಡ್ಯ : ಮಂಡ್ಯ ಲೋಕಸಭಾ ಕ್ಷೇತ್ರದಲ್ಲೇ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸುತ್ತಾರೆ ಎಂದು ಸಂಸದೆಯ ಆಪ್ತ ಹನಕೆರೆ ಶಶಿಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹನಕೆರೆ ಶಶಿಕುಮಾರ್ , ಮಂಡ್ಯ ಕ್ಷೇತ್ರವನ್ನು ಬಿಜೆಪಿಯೇ ಉಳಿಸಿಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಸುಮಲತಾ ಅಂಬರೀಶ್ ಅವರು ಕಳೆದ ನಾಲ್ಕು ವರ್ಷದಿಂದ ಸಾಕಷ್ಟು ಅಭಿವೃದ್ಧಿ ಮಾಡಿದ್ದಾರೆ ಮತ್ತು ಮುಂದಿನ ಚುನಾವಣೆಯಲ್ಲೂ ಸುಮಲತಾ ಅಭ್ಯರ್ಥಿ ಆಗಿರುತ್ತಾರೆ.
ಸಂಸದೆ ಸುಮಲತಾ ಅವರು ಕೆಆರ್‌ಎಸ್ ಸುತ್ತಮುತ್ತಲಿನ ಅಕ್ರಮ ಗಣಿಗಾರಿಕೆ ವಿರುದ್ಧ ಹೋರಾಟ ಸೇರಿದಂತೆ ಎಲ್ಲಾ ಹೋರಾಟಗಳಲ್ಲೂ ಸುಮಲತಾ ಮುಂಚೂಣಿಯಲ್ಲಿದ್ದಾರೆ ಮತ್ತು ಅತಿ ಹೆಚ್ಚು ದಿಶಾ ಸಭೆ ನಡೆಸಿದ ಹೆಗ್ಗಳಿಕೆ ಸುಮಲತಾ ಅವರದ್ದು ಎಂದರು.
ಈಗಲೂ ಸುಮಲತಾ ಪಕ್ಷೇತರ ಸಂಸದೆ, ಬಿಜೆಪಿ ಸದಸ್ಯತ್ವ ಪಡೆದಿಲ್ಲ. ಪಕ್ಷ ಯಾವುದಾದರೂ ಸುಮಲತಾ ಅಂಬರೀಶ್ ಅವರು ಮಂಡ್ಯ ಅಭ್ಯರ್ಥಿ ಆಗಿರಬೇಕು ಎಂದು ಆಗ್ರಹಿಸುತ್ತಾರೆ.
ಬಿಜೆಪಿ ಮಂಡ್ಯವನ್ನ ಜೆಡಿಎ ಬಿಟ್ಟು ಕೊಟ್ಟರೂ ಸಹ ಸುಮಲತಾ ಅವರ ಸ್ಪರ್ಧೆ ಖಚಿತವಾಗಿದೆ. ಆದರೆ ಬಿಜೆಪಿ ಮಂಡ್ಯ ಉಳಿಸಿಕೊಳ್ಳುವ ವಿಶ್ವಾಸವಿದೆ.ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ
ರಾಜಕೀಯದಲ್ಲಿ ಬದಲಾವಣೆ ಗಾಳಿ ಯಾವಾಗ ಬೇಕಾದರೂ ಬೀಸಬಹುದು , ಸುಮಲತಾ ಅಂಬರೀಶ್ ಅವರು ಬೆಂಗಳೂರಿಗೆ ಬಂದ ನಂತರ ನಿಯೋಗ ಭೇಟಿ ಮಾಡುತ್ತದೆ ಎಂದು ಹೇಳಿದರು.
More Stories
ಮಾತೃವಾತ್ಸಲ್ಯದ ಗಣಿ, ಪ್ರೇಮಮಯಿ ಜಗನ್ಮಾತೆ ಶಾರದಾದೇವಿ
ಓದಿನ ಮಹತ್ವ
ಕುಂಭಮೇಳ ಪ್ರಯಾಣಿಕರಿಗೆ ಸುವಾರ್ತೆ: ಮೈಸೂರು-ಪ್ರಯಾಗ್ ರಾಜ್ ವಿಶೇಷ ರೈಲು ಸೇವೆ