January 10, 2025

Newsnap Kannada

The World at your finger tips!

viji

ಆತ್ಮಹತ್ಯೆ ಅನುಮಾನದ ಹುತ್ತ : ಜೀವಕ್ಕೆ ಮುಳುವಾದ ಕಿರುತೆರೆ ನಟಿ ವಿಜಿ ಗುಟ್ಟಾದ ಮದುವೆ !

Spread the love

ಮಾನಸಿಕ ಖಿನ್ನತೆಯ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡ ತಮಿಳು ಕಿರುತೆರೆ ನಟಿ ವಿಜಿ ಚಿತ್ರಾ ಕೆಲವು ದಿನಗಳ ಹಿಂದೆ ಉದ್ಯಮಿ ಹೇಮಂತ್ ಎಂಬುವವರನ್ನು ಗುಟ್ಟಾಗಿ ವಿವಾಹವಾಗಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

28 ವರ್ಷ ವಯಸ್ಸಿನ ಚಿತ್ರಾ ಆತ್ಮಹತ್ಯೆ ಮಾಡಿಕೊಂಡರೇ, ಅಥವಾ ಇದೊಂದು ಕೊಲೆಯೇ ಎಂಬ ಅನುಮಾನ ಪೋಲಿಸರನ್ನು ಕಾಡುತ್ತಿದೆ.

ಕೆಲವೇ ತಿಂಗಳ ಹಿಂದೆ ಚಿತ್ರಾ ಹೇಮಂತ್ ಜೊತೆಯಲ್ಲಿ ಗುಟ್ಟಾಗಿ ನಿಶ್ಚಿತಾರ್ಥ ಮಾಡಿಕೊಂಡು, ರಿಜಿಸ್ಟ್ರಾರ್ ಮದುವೆ ಕೂಡಾ ಆಗಿದ್ದರು. ನಿಶ್ಚಿತಾರ್ಥದ ನಂತರ ಪಂಚತಾರ ಹೋಟೆಲ್ ನ ರೂಂ ನಲ್ಲಿ ಒಟ್ಟಿಗೆ ವಾಸವಾಗಿದ್ದರು ಎಂಬ ಸಂಗತಿಯೂ ಕೂಡ ಪೋಲಿಸ್ ವಿಚಾರಣೆಯಿಂದ ಬಯಲಾಗಿದೆ.

ಮಂಗಳವಾರ ರಾತ್ರಿ ಶೂಟಿಂಗ್ ಮುಗಿಸಿಕೊಂಡು ಬಂದ ಚಿತ್ರಾ,‌ಪ್ರೆಶ್ ಆಪ್ ಆಗಿ ಬರುತ್ತೇನೆ ಎಂದು ರೂಂ ಒಳಗೆ ಹೋದವರು ಎರಡು ಗಂಟೆ ಯಾದರೂ ಬರಲೇಇಲ್ಲ. ಅನುಮಾನಗೊಂಡ ಹೇಮಂತ್ ಹೋಟೆಲ್ ಮ್ಯಾನೇಜರ್ ಗಮನಕ್ಕೆ ತಂದು, ಬದಲಿ ಕೀ ಯಿಂದ ರೂಂ ಬಾಗಿಲು ತೆರೆದಾಗ ಆಕೆ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಇದ್ದಳು.‌

ಅನುಮಾನಕ್ಕೆ ಕಾರಣಗಳು ಇವು:
  • ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ ಚಿತ್ರಾಳ ಗಲ್ಲದ ಮೇಲೆ ರಕ್ತ ಹೆಪ್ಪುಗಟ್ಟಲು ಹೇಗೆ ಸಾಧ್ಯ?
  • ಕೊನೆ ದಿನ ಶೂಟಿಂಗ್ ನಲ್ಲೂ ಕೂಡ ಎಲ್ಲರೊಂದಿಗೆ ನಗು, ನಗುತ್ತಾ ಕಾಲ ಕಳೆದಿದ್ದಾಳೆ. ಆ ದಿನದ ಶೂಟಿಂಗ್ ನ ಫೋಟೋ ಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಅಪ್ ಲೋಡ್ ಮಾಡಿದ್ದಾಳೆ.
  • ಈ ಕಾರಣಕ್ಕಾಗಿ ಆಕೆ ಖಿನ್ನತೆಯಿಂದ ಬಳಲುತ್ತಿದ್ದಳು ಎಂದು ನಂಬುವುದೇ ಪೋಲಿಸರಿಗೆ ಕಷ್ಟವಾಗಿದೆ.
  • ಗುಟ್ಟಾಗಿ ಮದುವೆ ಆಗಿದ್ದು ಯಾಕೆ? ಹೇಮಂತ್ ನೊಂದಿಗೆ ರೂಂ ನಲ್ಲಿ ಕೆಲವು ತಿಂಗಳಿನಿಂದ ವಾಸವಾಗಿದ್ದ ಯಾಕೆ?
  • ಪೋಲಿಸರು ಶವ ಪರೀಕ್ಷಾ ವರದಿ ಕಾಯುತ್ತಿದ್ದಾರೆ. ಈ ವರದಿ ಆಧರಿಸಿ ತನಿಖೆಯನ್ನು ವಿವಿಧ ಕೋನಗಳಿಂದ ಮಾಡುತ್ತಾರೆ.

Copyright © All rights reserved Newsnap | Newsever by AF themes.
error: Content is protected !!