February 19, 2026

Newsnap Kannada

The World at your finger tips!

sucide

ಪರೀಕ್ಷೆಗೆ ಹೆದರಿ ಮೈಸೂರಿನಲ್ಲಿ ಸಂಶೋಧನಾ ವಿದ್ಯಾರ್ಥಿನಿ ಆತ್ಮಹತ್ಯೆ

Spread the love

ಪರೀಕ್ಷೆಯ ಭಯದಿಂದಾಗಿ ಸಂಶೋಧನಾ ವಿದ್ಯಾರ್ಥಿನಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನಲ್ಲಿ ಜರುಗಿದೆ

ಮೈಸೂರಿನ ಸರಸ್ವತಿಪುರಂನಲ್ಲಿನ ರಶ್ಮಿ (29) ಎಂ.ಎಸ್ಸಿ ಕೆಮಿಸ್ಟ್ರಿ ಮುಗಿಸಿ, ಜೆಎಸ್‌ಎಸ್ ಕಾಲೇಜಿನಲ್ಲಿ ಪಾರ್ಟ್ ಟೈಂ ಉಪನ್ಯಾಸಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದರು.ಜೊತೆಯಲ್ಲಿ ಪಿಹೆಚ್ ಡಿ ಕೂಡ ಮಾಡುತ್ತಿದ್ದರು.

ಪಿಹೆಚ್ ಡಿ ಮಾಡುತ್ತಿದ್ದಂತ ರಶ್ಮಿ ಸರಸ್ವತಿ ಪುರಂನಲ್ಲಿರುವ ಪಿಜಿಯೊಂದರಲ್ಲಿ ಉಳಿದುಕೊಂಡಿದ್ದರು. ಪರೀಕ್ಷೆಯ ಒತ್ತಡಕ್ಕೆ ಒಳಗಾಗಿ, ಇಂದು ಆತ್ಮಹತ್ಯೆಗೆ ಶರಣಾಗಿರೋದಾಗಿ ತಿಳಿದು ಬಂದಿದೆ.

ಈ ಸಂಬಂಧ ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

error: Content is protected !!