ಕೋರೋನಾ ಕಾರಣ ಆರ್ಥಿಕ ಸಂಕಷ್ಟದಿಂದ ಎಲ್ಲರೂ ಬಳಲಿ ಬೆಂಡಾಗಿರುವವರೇ. ಇನ್ನು ಪ್ರಾಣಿಗಳ ಅವಸ್ಥೆ ಏನಾಗಿರಬೇಡ. ಈ ಹಿನ್ನಲೆಯಲ್ಲಿ ಮೈಸೂರು ಮೃಗಾಲಯ ಕ್ಕೆ ಇನ್ಫೋಸಿಸ್‌ನ ಸುಧಾಮೂರ್ತಿಯವರು ಮತ್ತೊಮ್ಮೆ 20 ಲಕ್ಷ ರು ಗಳನ್ನು ದೇಣಿಗೆಯಾಗಿ ನೀಡಿದ್ದಾರೆ.
ಮೈಸೂರು ಮೃಗಾಲಯದಲ್ಲಿರುವ ಪ್ರಾಣಿಗಳ ಆರೈಕೆಯನ್ನು, ಪ್ರವಾಸಿಗರು ನೀಡುವ ಟಿಕೆಟ್ ಹಣದಿಂದಲೇ ನಿರ್ವಹಣೆ ಮಾಡುತ್ತಿದ್ದರು. ಆದರೆ ಪ್ರವಾಸಿಗರ ಸಂಖ್ಯೆ ಲಾಕ್‌ಡೌನ್ ವೇಳೆಯಲ್ಲಿ ಇಳಿಮುಖ ವಾಗಿದ್ದರಿಂದ ಪ್ರಾಣಿಗಳ ಆರೈಕೆ ಬಹಳ ಕಷ್ಟಸಾಧ್ಯವಾಗಿತ್ತು. ಆಗ ಮೇ ತಿಂಗಳಲ್ಲಿ ಸುಧಾಮೂರ್ತಿಯವರು 20 ಲಕ್ಷ ರೂ ದೇಣಿಗೆಯನ್ನು ಮೈಸೂರು ಮೃಗಾಲಯ ಕ್ಕೆ ನೀಡಿದ್ದರು. ಈಗ ಮತ್ತೊಮ್ಮೆ ದೇಣಿಗೆ ನೀಡುವ ಮೂಲಕ ಮಾನವೀಯತೆಯನ್ನು ಮೆರೆದಿದ್ದಾರೆ ಸುಧಾ ಮೂರ್ತಿಯವರು.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು