ಕಿಚ್ಚ ಸುದೀಪ್ ಅವರು ‘ಬಿಗ್‌ಬಾಸ್ ಕನ್ನಡ’ ಕಾರ್ಯಕ್ರಮದ ನಿರೂಪಕ ಸ್ಥಾನಕ್ಕೆ ಅಧಿಕೃತವಾಗಿ ಗುಡ್ ಬೈ ಹೇಳಿದ್ದಾರೆ.
ಬಿಗ್‌ಬಾಸ್ ಕನ್ನಡ ಸೀಸನ್ 11 ನ ತನ್ನ ಕೊನೆಯ ನಿರೂಪಣೆ ಎಂದು ಘೋಷಿಸಿ, ತನ್ನ ಸೋಷಿಯಲ್ ಮೀಡಿಯಾದಲ್ಲಿ ಈ ಮಾಹಿತಿ ಹಂಚಿಕೊಂಡಿದ್ದಾರೆ.
“#BBK11 ಗೆ ತೋರಿದ ಉತ್ತಮ ಪ್ರತಿಕ್ರಿಯೆಗಾಗಿ ಎಲ್ಲರಿಗೂ ಧನ್ಯವಾದಗಳು. ನೀವು ತೋರಿಸಿದ ಪ್ರೀತಿ ಟಿವಿಆರ್ (Television Rating) ನಲ್ಲಿ ಕಾಣುತ್ತಿದೆ. ಈ 10 ಪ್ಲಸ್ 1 ವರ್ಷ ನಿಮ್ಮೊಂದಿಗೆ ಪಯಣ ಮಾಡಿದ್ದು ಅದ್ಭುತವಾಗಿದೆ. ಈಗ ನನ್ನ ಮುಂದಿನ ಹೆಜ್ಜೆ ಇತರ ಕಡೆಗೆ ಇರಬೇಕು. ಬಿಗ್‌ಬಾಸ್ ಕನ್ನಡಕ್ಕೆ ಹೋಸ್ಟ್ ಆಗಿ ಇದು ನನ್ನ ಕೊನೆಯ ಸೀಸನ್ ಆಗಿರುತ್ತದೆ,” ಎಂದು ಸುದೀಪ್ ತಮ್ಮ ಪೋಸ್ಟ್‌ನಲ್ಲಿ ಬರೆದಿದ್ದಾರೆ.
ಈ ಘೋಷಣೆಯಿಂದಾಗಿ, ಬಿಗ್‌ಬಾಸ್ ಅಭಿಮಾನಿಗಳಲ್ಲಿ ನಿರಾಸೆ ಮೂಡಿದೆ. ‘ಕಿಚ್ಚನಿಲ್ಲದೆ ಬಿಗ್‌ಬಾಸ್ ಇಲ್ಲ’ ಎಂಬ ಅಭಿಮಾನಿಗಳ ಪ್ರತಿಕ್ರಿಯೆಗಳು ಸುದೀಪ್ ಅವರ ನಿರ್ಣಯದ ಬಗ್ಗೆ ಸಾಂತ್ವನವಾಗಿದೆ.ಇದನ್ನು ಓದಿ –ಖರ್ಗೆ ಕುಟುಂಬಕ್ಕೆ ‘ED’ ಆತಂಕ: ಸಿದ್ದಾರ್ಥ್ ಟ್ರಸ್ಟ್ 5 ಎಕರೆ ಸೈಟ್ ಹಿಂತಿರುಗಿಸಲು ನಿರ್ಧಾರ!
ಸುದೀಪ್ ಅವರ ನಿರೂಪಣೆಯೊಂದಿಗೆ, ಬಿಗ್‌ಬಾಸ್ ಕನ್ನಡ ಟಿವಿಆರ್ ಅಂಕಗಳಲ್ಲಿ ಭರ್ಜರಿ ಯಶಸ್ಸು ಸಾಧಿಸಿದ್ದು, 9.9 ಟಿವಿಆರ್ ದಾಖಲಿಸಿದೆ. ಈ ಸೀಸನ್ ಅತ್ಯುತ್ತಮವಾಗಿರಲಿ, ಎಂದು ಅಭಿಮಾನಿಗಳ ಆಶಯಕ್ಕೆ ಧನ್ಯವಾದ ಅರ್ಪಿಸಿದ ಸುದೀಪ್, ಬಿಗ್‌ಬಾಸ್ ತಂಡವು ಕೇಕ್ ಕಟ್ ಮಾಡಿ ಈ ಯಶಸ್ಸನ್ನು ಆಚರಿಸಿದೆ.
More Stories
ರಾಜ್ಯದಲ್ಲಿ ಮುಂದಿನ 5 ದಿನ ಮಳೆಯ ಮುನ್ಸೂಚನೆ
10 ಸಾವಿರ ಕೋಟಿ ಕೈಗಾರಿಕೆ ಸ್ಥಾಪನೆ: ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಒಪ್ಪಿಗೆ
ನಾನೊಬ್ಬ ರೈತ (ರೈತ ದಿನಾಚರಣೆಯ ಪ್ರಯುಕ್ತ )