ನನ್ನನ್ನು ತಯಾರಿಸುತ್ತಿದ್ದವರು ಕೆಲಸ ಮಾಡುತ್ತಿದ್ದಾಗ ಯಾವಾಗಲೂ ತಲೆ ಕೆಳಗೇ ಹಾಕಿಕೊಂಡಿರುತ್ತಿದ್ದರು. ತುಂಬ ಶೃದ್ಧೆಯಿಂದ ತಲೆ ಬಗ್ಗಿಸಿ ಕೆಲಸ ಮಾಡುತ್ತಿದ್ದರು. ಉತ್ತಮ ಸಂದೇಶವುಳ್ಳ ಬಣ್ಣಗಳಿಂದ, ಮತ್ತು ಅತ್ಯಂತ ಶ್ರದ್ಧೆಯಿಂದ ಬಿಡಿಸಿದ ಅರ್ಥಪೂರ್ಣ ಸುಂದರ ಚಿತ್ತಾರದಿಂದ ನಾನು ಕಂಗೊಳಿಸತೊಡಗಿದೆ.
ಕೆಲದಿನಗಳಲ್ಲಿ ಪೂರ್ಣಗೊಂಡ ನಾನು ಅತ್ಯಂತ ಜಾಗರೂಕತೆಯಿಂದ ಸೇರಬೇಕಾದ ಸ್ಥಳ ಸೇರಿದ್ದೆ. ನನ್ನನ್ನು ಹೊತ್ತವರು ತುಂಬ ವಿನಯ ಮತ್ತು ಭಕ್ತಿಯಿಂದ ನನ್ನನ್ನು ನೋಡುತ್ತಿದ್ದರು, ತಲೆಬಾಗಿ ನನಗೆ ಗೌರವ ನೀಡುತ್ತಿದ್ದರು……
ಇಂದು ವಿಶೇಷ ದಿನ. ನಾನು ಈ ದಿನಕ್ಕೆಂದೇ ಇಷ್ಟೆಲ್ಲ ತಯಾರಾಗಿದ್ದೆ. ಹೂವಿನಿಂದ ನನ್ನನ್ನು ಅಲಂಕರಿಸಿ, ದಾರದ ಸಹಾಯದಿಂದ ನನ್ನನ್ನು ಉನ್ನತ ಸ್ಥಾನಕ್ಕೇರಿಸಿದರು. ಆ ಕ್ಷಣ ನೋಡಿ……. ಜಾತಿ, ಧರ್ಮ ಎಂಬ ಯಾವುದೇ ಬೇಧ~ಭಾವವಿಲ್ಲದೇ ಪ್ರತೀ ಪ್ರಜೆಯೂ ತಲೆ ಎತ್ತಿ ನನಗೆ ‘ಧ್ವಜ ವಂದನೆ’ ಮಾಡಿದರು. ನಾನು ಸಂತಸದಿಂದಮೇಲೆ……ಮೇಲೆ …. ಹಾರಾಡುತ್ತಿದ್ದರೆ……ನನ್ನ ಕೆಳಗೆ ದೇಶದ ಎಲ್ಲ ಪ್ರಜೆಗಳೂ ಹೆಮ್ಮೆ, ಅಭಿಮಾನದಿಂದ ತಲೆ ಎತ್ತಿ ನನಗೆ ನಮಿಸುತ್ತಾ…..ನಾವೆಲ್ಲ ಒಂದೇ, ನಿನಗಾಗಿ ನಾವೇನು ಮಾಡಲೂ ಸಿದ್ಧ……ಎಂದು ಹೇಳುತ್ತಿರುವಂತೆ ತೋರುತ್ತಿತ್ತು. ನಾನೂ ಅವರನ್ನೆಲ್ಲ ನೋಡುತ್ತಾ….. ಅತ್ಯಂತ ಹೆಮ್ಮೆಯಿಂದ ಬೀಗುತ್ತಿದ್ದೆ. ನನಗಾಗಿ ತಲೆ ಬಾಗಿಸಿದವರನ್ನು ನಾನೆಂದೂ ತಲೆತಗ್ಗಿಸುವಂತೆ ಮಾಡುವುದಿಲ್ಲವೆಂಬ ಆಶ್ವಾಸನೆಯನ್ನು ಅವರಿಗೆ ನೀಡಿದ್ದೆ.ಇದನ್ನು ಓದಿ –ದೇಶ ಭಕ್ತಿಯ ಗೀತೆ. A song of patriotism.
ಎಲ್ಲರಿಗೂ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ವಂದೇ ಮಾತರಂ. 😊

ಜ್ಯೋತಿ ರಾಜೇಶ್


More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು