January 15, 2025

Newsnap Kannada

The World at your finger tips!

hotel tiff

ಹೋಟೆಲ್​ಗೆ ತಿಂಡಿ ತಿನ್ನಲು ಬಂದ ವಿದ್ಯಾರ್ಥಿ ಹೃದಯಾಘಾತದಿಂದ ಸಾವು

Spread the love

ಹೋಟೆಲ್​ಗೆ ತಿಂಡಿ ತಿನ್ನಲು ಬಂದಿದ್ದ ವಿದ್ಯಾರ್ಥಿಯೊಬ್ಬ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹುಣಸೂರು ತಾಲೂಕಿನ ನಂಜಾಪುರ ಗ್ರಾಮದಲ್ಲಿ ನಡೆದಿದೆ.

ಗ್ರಾಮದ ನಟರಾಜ್ ಪುತ್ರ ನಿತಿನ್(25) ಸಾವನ್ನಪ್ಪಿರುವ ಯುವಕ ನಿತಿನ್ ಎಲ್​ಎಲ್​ಬಿ ವ್ಯಾಸಂಗ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ನಿತಿನ್ ತಿಂಡಿ ತಿನ್ನಲು ಸ್ನೇಹಿತನೊಂದಿಗೆ ಹುಣಸೂರು ಪಟ್ಟಣದ ಹೋಟೆಲ್ ಗೆ ತೆರಳಿ ತಿಂಡಿಗೆ ಆಡ್೯ರ್ ಮಾಡಿದ್ದಾರೆ. ಈ ವೇಳೆ ತಿಂಡಿ ಬರುವಷ್ಟರಲ್ಲೇ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ.

ತಕ್ಷಣವೇ ಆತನ ಸ್ನೇಹಿತರು ನಿತಿನ್ ನನ್ನು ಉಪಚರಿಸಿ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆ ವೇಳೆಗೆ ನಿತಿನ್ ಪ್ರಾಣಪಕ್ಷಿ ಹಾರಿಹೋಗಿತ್ತು. ಯುವಕ ಹೋಟೆಲ್ ನಲ್ಲಿದ್ದ ಕೊನೆ ಕ್ಷಣದ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿ ವೈರಲ್ ಆಗಿದೆ.
.

Copyright © All rights reserved Newsnap | Newsever by AF themes.
error: Content is protected !!