ಈ ಹಿನ್ನೆಲೆಯಲ್ಲಿ, ದೂರುದಾರ ಸ್ನೇಹಮಯಿ ಕೃಷ್ಣ ಅವರು ಇಂದು ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ, “ಸಿಎಂಗೆ ಶಿಕ್ಷೆ ನೀಡುವವರೆಗೂ ನನ್ನ ಹೋರಾಟ ಮುಂದುವರೆಯುತ್ತದೆ” ಎಂದು ತಿಳಿಸಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಇದು ಹೋರಾಟದ ಆರಂಭ ಮಾತ್ರ, ಅಂತ್ಯವಲ್ಲ. ನಾನು ಇಂದು ಲೋಕಾಯುಕ್ತ ಕಚೇರಿಗೆ ಮನವಿ ನೀಡಲು ಬಂದಿದ್ದೇನೆ. ತನಿಖೆಯ ಕುರಿತಂತೆ ಮನವಿ ಸಲ್ಲಿಸಿದೆ. ಯಾವುದೇ ಕೇಸ್ ದಾಖಲಾಗಿದ್ರೆ, ನಾನು ಫಾಲೋ ಅಪ್ ಮಾಡುವೆ ಮತ್ತು ತನಿಖೆಗೆ ಸಹಕಾರಿ ಆಗುವ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದೆ” ಎಂದರು.ತಿರುಪತಿ ಲಡ್ಡು ವಿವಾದ: ರಾಜಕೀಯದಿಂದ ಧರ್ಮವನ್ನು ದೂರವಿಡಲು ಸುಪ್ರೀಂ ಕೋರ್ಟ್ ಸೂಚನೆ
“ನನಗೆ ಈಗಲೂ ಲೋಕಾಯುಕ್ತ ತನಿಖೆ ಮೇಲೆ ನಂಬಿಕೆ ಇಲ್ಲ. ಆದ್ದರಿಂದ, ಇಂದು ನೇರವಾಗಿ ದೂರನ್ನು ಸಲ್ಲಿಸಲಾಗಿದೆ. ಸಿಬಿಐ ಮತ್ತು ಇಡಿಯನ್ನು ಮಾತ್ರ ನ್ಯಾಯ ಸಿಗಲಿದೆ” ಎಂದು ಅವರು ಹೋರಾಟ ಮುಂದುವರಿಸುವ ನಿರ್ಧಾರವನ್ನು ಪುನಃ ವ್ಯಕ್ತಪಡಿಸಿದ್ದಾರೆ.
More Stories
ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ನಟ ದರ್ಶನ್
ಲೋಕಾಯುಕ್ತದ ಹಿರಿಯ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ಆಯೋಗಕ್ಕೆ ದೂರು: ಸ್ನೇಹಮಯಿ
ಅತ್ತೆ-ಸೊಸೆ ಜಗಳ: ತಾಯಿ-ಮಗ ಆತ್ಮಹತ್ಯೆ ಗೆ ಶರಣು