‘ಗ್ಯಾರಂಟಿ ಯೋಜನೆ’ ನಿಲ್ಲಿಸಿ: ಕಾಂಗ್ರೆಸ್ ನಾಯಕ ಎಂ.ಲಕ್ಷ್ಮಣ್ ಆಗ್ರಹ

Team Newsnap
1 Min Read

ಮೈಸೂರು : ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಜನರಿಗೆ ಇಷ್ಟವಾಗಿಲ್ಲ ,ಸಾಮೂಹಿಕವಾಗಿ ಗ್ಯಾರಂಟಿ ಯೋಜನೆ (Guarantee Scheme) ಕೊಡುವುದನ್ನು ನಿಲ್ಲಿಸೋದೆ ಒಳಿತು ಎಂದು ಮೈಸೂರು-ಕೊಡಗು ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ (M Lakshman) ಅಸಮಾಧಾನ ಹೊರಹಾಕಿದ್ದಾರೆ.

ಮೈಸೂರಿನಲ್ಲಿ (Mysuru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ನಮ್ಮ ಗ್ಯಾರಂಟಿ ವಿರುದ್ಧ ಮಾತಾನಾಡುತ್ತಿತ್ತು. ಜನ ಅವರನ್ನು ಬೆಂಬಲಿಸಿದ್ದಾರೆ. ಹಾಗಾಗಿ ಜನರಿಗೆ ನಮ್ಮ ಗ್ಯಾರಂಟಿ ಇಷ್ಟ ಆಗಿಲ್ಲ ಅಂತಲೇ ಅಲ್ವಾ? ಗ್ಯಾರಂಟಿ ಯೋಜನೆ ಬಗ್ಗೆ ಮುಖ್ಯಮಂತ್ರಿಗಳು ಈಗ ಮರು ಪರಿಶೀಲನೆ ಮಾಡಬೇಕು ಎಂದರು.

ಐಷಾರಾಮಿ ಕಾರ್ ಹೊಂದಿರುವರು ,25,000 ಸಂಬಳ ಪಡೆಯುವ ವ್ಯಕ್ತಿಗೆ ಪುಕ್ಕಟೆ ಕರೆಂಟ್ ಕೊಟ್ಟರೆ ಹೇಗೆ? ಈಗಲೂ ಗ್ಯಾರಂಟಿ ಹಣದಿಂದಲೇ ಜೀವನ ನಡೆಸುವ ಜನ ಇದ್ದಾರೆ.ಒಂದೇ ಕುಟುಂಬದ ನಾಲ್ವರು ವಿಷ ಸೇವನೆ : ಓರ್ವ ಸಾವು

ಇದಕ್ಕೆ ಉದಾಹರಣೆ ಎಂದರೆ ಹುಣಸೂರಿನ ಹಲವು ಹಳ್ಳಿಗಳಲ್ಲಿ ಕೇವಲ ಒಂದೇ ಸಮುದಾಯದವರು ಇದ್ದಾರೆ. ಅಲ್ಲಿ ಬಿಜೆಪಿಗೆ 600ಕ್ಕೂ ಹೆಚ್ಚು ಮತ ನೀಡಿದ್ರೆ ನನಗೆ ಕೇವಲ ಮೂರು, ಏಳು ಮತಗಳನ್ನ ನೀಡಿದ್ದಾರೆ. ಒಕ್ಕಲಿಗರು ನನಗೆ ಮತ ಹಾಕಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

Share This Article
Leave a comment