November 27, 2024

Newsnap Kannada

The World at your finger tips!

shivaganga prathime

ವೀರಾಪುರದಲ್ಲಿ ಪ್ರತಿಮೆ ಮಾಡಿ ಎಂದಿದ್ದರೆ ? ಅನ್ನ,ಅಕ್ಷರ, ಆರೋಗ್ಯವೇ ಶ್ರೀಗಳ ಆಶಯ – ರಾಜಕಾರಣಿಗಳು ಹೀಗೇಕೆ?

Spread the love

ಕೋಟಿಗಟ್ಟಲೆ ಖರ್ಚು ಮಾಡಿ ತಮ್ಮದೊಂದು ಪ್ರತಿಮೆ ಮಾಡಿ ಎಂದು ನಡೆದಾಡುವ ದೇವರು ಸಿದ್ದಗಂಗಾ ಶಿವಕುಮಾರ ಸ್ವಾಮೀಜಿಗಳು ಯಾವತ್ತೂ, ಯಾರನ್ನೂ ದುಂಬಾಲು ಬಿದ್ದ ಉದಾಹರಣೆ ಇಲ್ಲ. ಆದರೆ ಶ್ರೀಗಳ ಆಶಯವೇ ಬೇರೆ. ಈ ರಾಜಕಾರಣಿಗಳ ಸ್ವಾರ್ಥವೇ ಬೇರೆ.

ಇದೊಂದು ಉದಾಹರಣೆಯಾಗಿ ನ್ಯೂಸ್ ಸ್ಯ್ನಾಪ್ ಓದುಗ, ಸಿದ್ದಗಂಗಾ ಮಠದ ಹಳೆಯ ವಿದ್ಯಾರ್ಥಿಯೊಬ್ಬರು ಸಾಮಾಜಿಕ ಕಾಳಜಿ ಇಟ್ಟುಕೊಂಡು ವ್ಯಕ್ತಪಡಿಸಿದ ಅಭಿಪ್ರಾಯ ಅರ್ಥಪೂರ್ಣವಾಗಿದೆ.

 ಮುಂದೊಂದು ದಿನ ಇದೇ ರೀತಿ ವೀರಾಪುರದಲ್ಲಿ ಶತಕೋಟಿ ವ್ಯಯಿಸಿ ಕಟ್ಟಿಸುತ್ತಿರುವ ಶ್ರೀ ಸಿದ್ಧಗಂಗಾ ಶ್ರೀಗಳ ಪ್ರತಿಮೆ ಜಗತ್ತಿನ ಶ್ರೇಷ್ಠತೆಯ ಸಾಲಿಗೆ ಸೇರಬಹುದು.

ತಮ್ಮ ಬದುಕಿನಲ್ಲಿ ಸಮಾಜ, ಮಕ್ಕಳು, ಅಕ್ಷರ ಎನ್ನುತ್ತಲೇಜೀವ ಸವಿಸಿದ ಸಿದ್ದಗಂಗಾ ಶ್ರೀಗಳ ಆದರ್ಶ, ಬದುಕು ಇವತ್ತು ಯಾರೋ ಒಬ್ಬನ ರಾಜಕೀಯ ಶ್ರೇಯಸ್ಸಿಗೆ ಬಲಿಯಾಗುತ್ತಿದೆ.

ಉಸಿರಾಡಲು ಆಕ್ಸಿಜನ್ ಸಿಗದೆ ಬೀದಿ ಬೀದಿಯಲ್ಲಿ ಜನ ಸಾಯುವಾಗ ಶ್ರೀಗಳ ಪ್ರತಿಮೆ ನಿರ್ಮಾಣಕ್ಕೆ ಟೊಂಕ ಕಟ್ಟಿದೆ ಈ ಸರ್ಕಾರ. ಅದಕ್ಕೆ ಚೂರು ಮುಜುಗರುವು ಇಲ್ಲದೆ ಬೆಂಬಲಿಸಿದ ಉತ್ತರಾಧಿಕಾರಿಗಳು.

ಶಿವಕುಮಾರಸ್ವಾಮಿ ಸ್ವಾಮೀಜಿ ಅವರಿಗೆ ಆದರ್ಶವಾಗಿದ್ದು ಬಸವಣ್ಣ. ಸಿದ್ದಗಂಗಾ ಮಠದಲ್ಲಿ ಮಾತ್ರವಲ್ಲ ಎಲ್ಲಿಯಾದರೂ ಬಸವಣ್ಣನ ಪುಟ್ಟದೊಂದು ಪ್ರತಿಮೆ, ದೇವಾಲಯವನ್ನು ಶ್ರೀಗಳು ಕಟ್ಟಿಸಿದ್ದು ಉದಾಹರಣೆ ಇದೆಯೇ? ಅಂದು ಶ್ರೀ ಗಳು ಇಚ್ಛಿಸಿದ್ದರೆ ಬಸವಣ್ಣನವರ ಸಾವಿರ ಅಡಿ ಎತ್ತರದ ಪ್ರತಿಮೆಯನ್ನು ಸ್ಥಾಪಿಸಲು ಅಸಾಧ್ಯವಾಗಿತ್ತಾ?.

ಹಳ್ಳಿಗಳಲ್ಲಿ ಬಸವ ಜಯಂತಿ ಆಯೋಜಿಸಿದರು. ನಾಟಕವಾಡಿಸಿ ಬಸವತತ್ವ ಸಾರಿ ದೊಡ್ಡವರಾದರು. ಶ್ರೇಷ್ಠ ಶರಣರು. ಕೊನೆಯುಸಿರೆಳೆಯುವರು ಸ್ಥಾವರದ ಬಗ್ಗೆ ಚಿಂತಿಸದೆ ಮಕ್ಕಳಿಗೆ ಚಿಂತಿಸಿದ ಜಂಗಮ. ಆ ಮಹಾನ್ ವ್ಯಕ್ತಿತ್ವಕ್ಕೆ ಅಪಚಾರ ಮಾಡಬೇಡಿ. ನಿಮ್ಮಲ್ಲಿ ಕಿಂಚಿತ್ತಾದರೂ ಮಾನವೀಯತೆ, ಶ್ರೀಗಳ ಮೇಲಿನ ಗೌರವ ಇದ್ದರೆ ಕೂಡಲೇ ಪ್ರತಿಮೆ ನಿರ್ಮಾಣ ಕಾರ್ಯ ನಿಲ್ಲಿಸಿ, ಮನುಕುಲ ಜೀವ ಉಳಿಸಲು ವ್ಯಯಿಸುವಂತೆ ಹೇಳಿ. ಸರ್ಕಾರ ಕೇಳಲಿ. ಪ್ರತಿಮೆ ಬದಲಿಗೆ ೪೦ ಕೋಟಿ ವೆಚ್ಚದ ಆಸ್ಪತ್ರೆ ಕಟ್ಟಿಸಿ, ಆಸ್ಪತ್ರೆಯಲ್ಲಿ ಬಡ ಜನರಿಗೆ ಉಚಿತ ಆರೋಗ್ಯ ಸೇವೆಗೆ ೪೦ ಕೋಟಿ ಠೇವಣಿ ಇಡಲಿ. ಉಳಿದ ಹಣ ವೈದ್ಯಕೀಯ ಸಿಬ್ಬಂದಿ ವೇತನಕ್ಕೆ ಮೀಸಲಾಗಲಿ. ಮನುಷ್ಯರಾಗಿ ಯೋಜಿಸಿ, ರಾಜಕೀಯ ಫುಢಾರಿಗಳ ರಕ್ಷಕರಂತೆ ಬೇಡ. ಇದೊಂದು ಕಳಕಳಿಯ ಮನವಿ.  

Copyright © All rights reserved Newsnap | Newsever by AF themes.
error: Content is protected !!