February 23, 2026

Newsnap Kannada

The World at your finger tips!

mathru mandli

ಮೈಸೂರಿನಲ್ಲಿ ಅಂಬೇಡ್ಕರ್ ಪ್ರತಿಮೆ ತೆರವು – ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ

Spread the love

ಮೈಸೂರಿನ ಮಾತೃಮಂಡಳಿ ಶಾಲೆ ವೃತ್ತದಲ್ಲಿ ರಾತ್ರೋ ರಾತ್ರಿ ಸ್ಥಾಪನೆ ಮಾಡಿದ ಅಂಬೇಡ್ಕರ್ ಪ್ರತಿಮೆ ತೆರುವುಗೊಳಿಸಿದ ಹಿನ್ನಲೆ ಅಭಿಮಾನಿಯೊಬ್ಬ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಜರುಗಿದೆ

ಹೂಟಗಳ್ಳಿ ನಿವಾಸಿ ಸತೀಶ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರತಿಮೆ ತೆರುವುಗೊಳಿಸಿದ ವಿಚಾರವಾಗಿ ಪೊಲೀಸರೊಂದಿಗೆ ಮಾತನ ಚಕಮಕಿ ನಡೆದಿದೆ.

ಅಂಬೇಡ್ಕರ್ ಪ್ರತಿಮೆ ಸ್ಥಾಪನೆ ಮಾಡಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಸತೀಶ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎನ್ನಲಾಗಿದೆ. ವಿವಿ ಪುರಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಪಾಲಿಕೆ ಅಧಿಕಾರಿಗಳು ಮೊಕ್ಕಾಂ ಹೂಡಿದ್ದಾರೆ.

ಮಾತೃಮಂಡಳಿ ವೃತ್ತದಲ್ಲಿ ಉಧ್ವಿಘ್ನದ ಸ್ಥಿತಿ ವಾತಾವರಣ ನಿರ್ಮಾಣವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ನೂರಾರು ಪೊಲೀಸರನ್ನ ನಿಯೋಜಿಸಲಾಗಿದೆ.

error: Content is protected !!