January 10, 2025

Newsnap Kannada

The World at your finger tips!

kedaranath3

ಕೇದಾರನಾಥದಲ್ಲಿ ಆದಿ ಗುರು ಶಂಕರಾಚಾರ್ಯರ ಪ್ರತಿಮೆ ಲೋಕಾರ್ಪಣೆ

Spread the love

ಅದ್ವೈತ ತತ್ವ ಪ್ರತಿಪಾದಕ ಆದಿ ಶಂಕರಾಚಾರ್ಯರ ಪ್ರತಿಮೆಯನ್ನು ಕೇದಾರನಾಥದಲ್ಲಿ ಶುಕ್ರವಾರ
ಪ್ರಧಾನ ಮಂತ್ರಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದರು.

kedaranath

2013ರ ಉತ್ತರಾಖಂಡ್ ಪ್ರವಾಹದಲ್ಲಿ ಆದಿ ಶಂಕರಾಚಾರ್ಯರ ಸಮಾಧಿ ಧ್ವಂಸಗೊಂಡಿತ್ತು.

ಇದೀಗ ಅದನ್ನು ಪುನರ್​ ನಿರ್ಮಾಣ ಮಾಡಲಾಗಿದೆ. ನೂತನ ಪ್ರತಿಮೆ 12 ಅಡಿ ಉದ್ದ, 9 ಅಡಿ ಅಗಲದ 28 ಟನ್ ತೂಕ ಹೊಂದಿದೆ. ಈ ಮೂತಿ೯ಗೆ ಮೋದಿ ವಿಶೇಷ ಪೂಜೆ ಸಲ್ಲಿಸಿ ಅನಾವರಣಗೊಳಿಸಿದ್ದಾರೆ.

ಬೆಳಗ್ಗೆ ಕೇದಾರನಾಥ್​ಕ್ಕೆ ಆಗಮಿಸಿದ್ದ ಮೋದಿ, ಮೊದಲು ಶಿವ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.

ಆ ಬಳಿಕ ನೂತನ ಪ್ರತಿಮೆಯನ್ನು ಉದ್ಘಾಟನೆ ಮಾಡಿ ಪ್ರರ್ಥನೆ ಸಲ್ಲಿಸಿದ್ದಾರೆ.

kedarnath

ಇನ್ನು ಈ ವಿಶೇಷ ಪ್ರತಿಮೆಯನ್ನು ಮೈಸೂರಿನ ಶಿಲ್ಪಿ ತಯಾರಿಸಿರುವುದು ವಿಶೇಷ ಶಂಕರಾಚಾರ್ಯರ ಪ್ರತಿಮೆಯ ಕೇದಾರನಾಥದಲ್ಲಿ ಅನಾವರಣ ಮಾಡಲಾಯಿತು.

kedaranath4

ಶಿಲ್ಪ ಕಲಾವಿದ ಅರುಣ್ ಯೋಗಿರಾಜ್ ಕೈ ಚಳಕದಲ್ಲಿ ಮೂಡಿಬಂದಿರುವ ಪ್ರತಿಮೆ ಶಿಫ್ಟ್ ಮಾಡಿದ್ದೆ ಒಂದು ಸಾಹಸ.

Copyright © All rights reserved Newsnap | Newsever by AF themes.
error: Content is protected !!