December 31, 2024

Newsnap Kannada

The World at your finger tips!

kset

ಇಂದು ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷಾ ಫಲಿತಾಂಶ ಪ್ರಕಟ

Spread the love

ಮೈಸೂರು ವಿಶ್ವವಿದ್ಯಾಲಯವು 2020ರ ಸೆಪ್ಟೆಂಬರ್ ನಲ್ಲಿ ನಡೆಸಿದ್ದ ಕರ್ನಾಟಕ ರಾಜ್ಯ ಉಪನ್ಯಾಸಕರ ಅರ್ಹತಾ ಪರೀಕ್ಷೆ(ಕೆ-ಸೆಟ್) ಫಲಿತಾಂಶವನ್ನು ಇಂದು (ಜ. 8) ರಂದು ಪ್ರಕಟಗೊಳಿಸಿದೆ.

ಮೈಸೂರು ವಿಶ್ವವಿದ್ಯಾಲಯವು ಪ್ರಕಟಣೆಯಲ್ಲಿ ಹೊರಡಿಸಿ 2020ರ ಸೆಪ್ಟೆಂಬರ್ ನಲ್ಲಿ ಪೂರ್ಣಗೊಳಿಸಿದ್ದ ಪರೀಕ್ಷೆ ಯ ಫಲಿತಾಂಶವನ್ನು ಜನವರಿ 8 ರಂದುwww.kset.uni-mysore.ac.in ಜಾಲತಾಣದಲ್ಲಿ ಪ್ರಕಟಿಸಲಾಗಿದೆ.

ರಾಜ್ಯದ 11 ಕೇಂದ್ರಗಳಲ್ಲಿ 41 ವಿಷಯಗಳಿಗೆ 79,717 ಅಭ್ಯರ್ಥಿಗಳು ಪರೀಕ್ಷೆ ಬರೆದಿದ್ದರು. ಅವರಲ್ಲಿ 5,495 ಮಂದಿಗೆ ರಾಜ್ಯದ ವಿಶ್ವವಿದ್ಯಾಲಯಗಳು ಮತ್ತು ಪ್ರಥಮ ದರ್ಜೆ ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗುವ ಅರ್ಹತೆ ಪಡೆದಿದ್ದಾರೆ ಎಂಬ ಮಾಹಿತಿ ದೊರೆತಿದೆ.

ಕೆ-ಸೆಟ್ ಪರೀಕ್ಷೆಯಲ್ಲಿ ಅರ್ಜಿ ಸಲ್ಲಿಸಿದ್ದ 1.06 ಲಕ್ಷ ವಿದ್ಯಾರ್ಥಿಗಳಲ್ಲಿ ಸುಮಾರು 80 ಸಾವಿರ ಮಂದಿ ಪರೀಕ್ಷೆಗೆ ಹಾಜರಾಗಿದ್ದರು.

ಪರೀಕ್ಷಾ ಕೇಂದ್ರ ಅರ್ಹತೆ ಪಡೆದ ಅಭ್ಯರ್ಥಿಗಳು

  • ಬೆಂಗಳೂರು 1133
  • ಬೆಳಗಾವಿ 200
  • ತುಮಕೂರು 234
  • ಶಿವಮೊಗ್ಗ 296
  • ಮೈಸೂರು 1248
  • ಮಂಗಳೂರು 391
  • ಕಲಬುರಗಿ 464
  • ಧಾರವಾಡ 668

” ದಾವಣಗೆರೆ 274

  • ವಿಜಯಪುರ 255
  • ಬಳ್ಳಾರಿ 332
Copyright © All rights reserved Newsnap | Newsever by AF themes.
error: Content is protected !!