November 22, 2024

Newsnap Kannada

The World at your finger tips!

ಇಂದಿನಿಂದ ರಾಜ್ಯದಾದ್ಯಂತ ಕೋವಿಡ್ ವ್ಯಾಕ್ಸಿನೇಷನ್ ಆರಂಭ

Spread the love

ಬೆಂಗಳೂರು: ಕೇಂದ್ರ ಸರ್ಕಾರವು ರಾಜ್ಯಕ್ಕೆ ಕೋವಿಶೀಲ್ಡ್ (Covishield) ಅಥವಾ ಕೊವ್ಯಾಕ್ಸಿನ್ (Covaxin) 2ನೇ ಲಸಿಕೆ ಪಡೆದವರಿಗೆ ನೀಡಲು 30,000 ಡೋಸ್ ಕಾರ್ಬೆವ್ಯಾಕ್ಸ್ (Corbevax) ಲಸಿಕೆಯನ್ನು ಸರಬರಾಜು ಮಾಡಿದೆ.

ಈ ಲಸಿಕೆ ತಾಂತ್ರಿಕ ಸಲಹಾ ಸಮಿತಿಯ ಶಿಫಾರಸಿನಂತೆ ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಲಸಿಕೆಯ 2ನೇ ಡೋಸ್ ಪಡೆದು ಆರು ತಿಂಗಳು ಅಥವಾ 26 ತಿಂಗಳು ಪೂರೈಸಿದ ಬಳಿಕವೂ ಮುನ್ನೆಚ್ಚರಿಕೆ ಡೋಸ್ ಪಡೆಯದವರಿಗೆ ನೀಡಬಹುದು . ವಿಜಾತಿ ಮುನ್ನೆಚ್ಚರಿಕೆಯಾಗಿ ಈ ಲಸಿಕೆಯನ್ನು ನೀಡಬಹುದು .

ಈ ಲಸಿಕೆಯನ್ನು 60 ವರ್ಷ ದಾಟಿದವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಪಡೆಯಬಹುದು.

ಈ ಲಸಿಕೆಯನ್ನು ಕೋವಿಡ್-19 ಲಸಿಕಾಕರಣದ ಮಾರ್ಗಸೂಚಿಯಂತೆಯೇ ನೀಡಲಾಗುವುದು.

ಜಿಲ್ಲಾ ಮಟ್ಟದಲ್ಲಿ ನಿರ್ಣಯಿಸಲಾದ ತಾಲೂಕು ಆಸ್ಪತ್ರೆ ಮತ್ತು ಜಿಲ್ಲಾ ಆಸ್ಪತ್ರೆಳಿಗೆ ಮಾತ್ರ ಹಂಚಿಕೆ ಮಾಡಿ ಲಸಿಕಾಕರಣ ಹಮ್ಮಿಕೊಳ್ಳಲಾಗಿದೆ.ವರ್ಷಾಚರಣೆ ಮುಗಿಸಿ ಬೈಕ್ ನಲ್ಲಿ ಬಂದ ಯುವಕರಿಗೆ ವಾಹನ ಡಿಕ್ಕಿ – ಯುವಕ ಸಾವು – ಮತ್ತಿಬ್ಬರಿಗೆ ಗಾಯ

ಯಾವ ಯಾವ ಜಿಲ್ಲೆಗಳಿಗೆ ಎಷ್ಟು ಕಾರ್ಬೆವ್ಯಾಕ್ಸ್ ಡೋಸ್ ಹಂಚಿಕೆ?

  • ಬೆಂಗಳೂರು ನಗರ-840,
  • ಬೆಂಗಳೂರು ಗ್ರಾಮಾಂತರ-480,
  • ಬಿಬಿಎಂಪಿ-5,680,
  • ಕೋಲಾರ-680,
  • ಚಿಕ್ಕಬಳ್ಳಾಪುರ-520,
  • ತುಮಕೂರು-1,300,
  • ರಾಮನಗರ-440,
  • ಕೊಡಗು-220,
  • ಮಂಡ್ಯ-720,
  • ಮೈಸೂರು-1,360,
  • ಚಾಮರಾಜನಗರ-440 ,
  • ಹಾಸನ-720,
  • ಚಿಕ್ಕಮಗಳೂರು-480,
  • ದಕ್ಷಿಣ ಕನ್ನಡ-1,140,
  • ಉಡುಪಿ-520,
  • ಬೀದರ್-840,
  • ಕಲಬುರಗಿ-1,280,
  • ರಾಯಚೂರು-820,
  • ಯಾದಗಿರಿ-480 ,
  • ಧಾರವಾಡ-920,
  • ಹಾವೇರಿ-780,
  • ಉತ್ತರ ಕನ್ನಡ-660,
  • ಬಳ್ಳಾರಿ-640,
  • ಚಿತ್ರದುರ್ಗ-720,
  • ದಾವಣಗೆರೆ-740,
  • ಶಿವಮೊಗ್ಗ-820,
  • ವಿಜಯನಗರ-560,
  • ಬಾಗಲಕೋಟೆ-900,
  • ವಿಜಯಪುರ-1,000,
  • ಗದಗ-500,
  • ಕೊಪ್ಪಳ-520,
  • ಬೆಳಗಾವಿ-2,280 .

Copyright © All rights reserved Newsnap | Newsever by AF themes.
error: Content is protected !!