February 19, 2026

Newsnap Kannada

The World at your finger tips!

teacher, learning, school

ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಕಾಲೇಜ್ ಗಳು ಆರಂಭ

Spread the love

ಇಂದಿನಿಂದ ಪೂರ್ಣ ಪ್ರಮಾಣದಲ್ಲಿ ಕಾಲೇಜುಗಳು ಆರಂಭವಾಗಲಿವೆ. ಈಗಾಗಲೇ ಎಸ್‌ಎಸ್‌ಎಲ್ ಸಿ ಮತ್ತು ದ್ವಿತೀಯ ಪಿಯುಸಿ ತರಗತಿಗಳು ಆರಂಭವಾಗಿವೆ.

ಇಂದಿನಿಂದ ಪದವಿ, ಸ್ನಾತಕೋತ್ತರ ಪದವಿ, ಪಾಲಿಟೆಕ್ನಿಕ್, ಇಂಜಿನಿಯರಿಂಗ್ ಆಫ್ ಲೈನ್ ತರಗತಿಗಳು ಆರಂಭ ವಾಗಲಿವೆ.

ಆರೋಗ್ಯ ಇಲಾಖೆ ನಿರ್ದೇಶನದಂತೆ ಮೊದಲ, ಎರಡನೇ ವರ್ಷದ ಪದವಿ, ಮೊದಲ ವರ್ಷದ ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್, ಡಿಪ್ಲೋಮಾ ಕೋರ್ಸ್ ಗಳು ಸೇರಿ ಎಲ್ಲಾ ತರಗತಿಗಳು ಆರಂಭವಾಗಲಿದೆ.

ನವೆಂಬರ್ 17 ರಿಂದ ಅಂತಿಮ ವರ್ಷದ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ ಮತ್ತು ಇಂಜಿನಿಯರಿಂಗ್ ತರಗತಿಗಳು ಆರಂಭವಾಗಿವೆ. 2 ತಿಂಗಳ ನಂತರ ಇಂದಿನಿಂದ ಸಂಪೂರ್ಣವಾಗಿ ತರಗತಿಗಳು ಆರಂಭವಾಗುತ್ತವೆ.

error: Content is protected !!