January 11, 2025

Newsnap Kannada

The World at your finger tips!

highcourt,congress,lokayukta

shock for Congress: High Court order to cancel ACB - Lokyukta gets power again

ಕೊರೋನಾ ಇಲ್ಲದ ತಾಲೂಕಿನಲ್ಲಿ ಶಾಲೆ ಆರಂಭಿಸಿ : ರಾಜ್ಯ ಹೈಕೋರ್ಟ್

Spread the love

ಕೊರೋನಾ ಇಲ್ಲದ ತಾಲೂಕುಗಳಲ್ಲಿ ಶಾಲೆ ಆರಂಭಿಸಲು ಹೈಕೋರ್ಟ್ ನಿರ್ದೇಶನ ನೀಡಿದೆ.

ಈ ಕುರಿತಂತೆ ನಡೆಸಿದ ವಿಚಾರಣೆಯಲ್ಲಿ ರಾಜ್ಯದ ಎಲ್ಲಾ ಶಾಲೆಗಳಲ್ಲೂ ಜನವರಿ 1 ರಿಂದ ವಿದ್ಯಾಗಮ ಆರಂಭವಾಗಲಿದೆ. ಎಲ್ಲಾ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲೂ 6 ರಿಂದ 9 ನೇ ತರಗತಿಗಳಿಗೆ ವಿದ್ಯಾಗಮ ಜಾರಿ ಮಾಡಲಾಗುತ್ತದೆ ಎಂದು ಸರ್ಕಾರದ ಪರ ವಕೀಲರು ಹೈಕೋರ್ಟ್ ಗೆ ಹೇಳಿದ್ದಾರೆ.

ಸರ್ಕಾರದ ಹೇಳಿಕೆ ದಾಖಲಿಸಿಕೊಂಡ ಹೈಕೋರ್ಟ್ ಈ ನಿರ್ಧಾರಕ್ಕೆ ಬದ್ದವಾಗಿರುವಂತೆ ಸೂಚನೆ ನೀಡಿದೆ.

ಶಾಲೆ ಸ್ಥಗಿತಕ್ಕಿಂತ ಪರಿಸ್ಥಿತಿ ಆಧರಿಸಿ ಕೊರೊನಾ ಇಲ್ಲದ ತಾಲೂಕುಗಳಲ್ಲಿ ಶಾಲೆ ಆರಂಭಿಸಬಹುದು ಎಂದು ಕೋರ್ಟ್ ಹೇಳಿದೆ.

ನ್ಯಾ. ಬಿ ಬಿ ನಾಗರತ್ನ ಹಾಗೂ ಆರ್ ನಟರಾಜ್ ಅವರ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ಇನ್ನೂ. ವಿದ್ಯಾರ್ಥಿಗಳು ಬಾಲ ಕಾರ್ಮಿಕ, ಬಾಲ್ಯ ವಿವಾಹಕ್ಕೆ ಒಳಗಾಗದಂತೆ ಕ್ರಮ ವಹಿಸಬೇಕು.

Copyright © All rights reserved Newsnap | Newsever by AF themes.
error: Content is protected !!