November 24, 2024

Newsnap Kannada

The World at your finger tips!

Suresh Kumar

ರಾಜ್ಯದಲ್ಲಿ ಜುಲೈ 3 ನೇ ವಾರ ಎಸ್ ಎಸ್ ಎಲ್ ಸಿ ಪರೀಕ್ಷೆ : ಪಿಯುಸಿ ಪರೀಕ್ಷೆ ರದ್ದು: ಸುರೇಶ್ ಕುಮಾರ್

Spread the love

2020-21 ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆ ಯನ್ನು ಜುಲೈ ಮೂರನೇ ವಾರ ನಡೆಸಲು ನಿರ್ಧರಿಸಲಾಗಿದೆ. ಮತ್ತು ಪಿಯುಸಿ ಪರೀಕ್ಷೆಗಳನ್ನು ಮಾತ್ರ ರದ್ದು ಮಾಡುವ ತೀರ್ಮಾನವನ್ನು ಸರ್ಕಾರ ಕೈಗೊಂಡಿದೆ ಎಂದು ಪ್ರಾಥಮಿಕ ಶಿಕ್ಷಣ ಸಚಿವ ಸುರೇಶ್ ಕುಮಾರ್ ಪ್ರಕಟಿಸಿದರು.

ಸುದ್ದಿಗಾರರ ಜೊತೆ ಮಾತನಾಡಿದ ಸಚಿವ ಸುರೇಶ್ ಕುಮಾರ್ , ಮಕ್ಕಳ ಯೋಗ ಕ್ಷೇಮ ಹಾಗೂ ಶೈಕ್ಷಣಿಕ ಗುಣ ಮಟ್ಟದ ಬಗ್ಗೆಯೂ ಆಲೋಚನೆ ಮಾಡಿ ಒಂದು ನಿರ್ಧಾರಕ್ಕೆ ಬಂದಿದ್ದೇವೆ ಎಂದರು.

ಎಲ್ಲರೂ ಪಾಸ್ – ಬಯಸಿದ ವಿದ್ಯಾರ್ಥಿಗಳಿಗೆ ಪರೀಕ್ಷೆ :

ಕಳೆದ ವರ್ಷದ ಪ್ರಥಮ ಪಿಯುಸಿ ಪರೀಕ್ಷೆ ಅಂಕಗಳನ್ನು ಗಮನದಲ್ಲಿ ಇಟ್ಟುಕೊಂಡು ಗ್ರೇಡ್ ಆಧಾರದಲ್ಲಿ ಪಾಸು ಮಾಡಲಾಗುವುದು. ಅಲ್ಲದೇ ಯಾವ ವಿದ್ಯಾರ್ಥಿ ಪರೀಕ್ಷೆ ಬರೆಯಲು ಬಯಸುತ್ತಾನೆ ಅಂತಹವರಿಗೆ ಕೋವಿಡ್ ಅಂತ್ಯವಾದ ನಂತರ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಲಾಗುವುದು ಎಂದು ಹೇಳಿದರು.

ಜುಲೈ ಮೂರನೇ ವಾರ ಎಸ್ ಎಸ್ ಎಲ್ ಸಿ ಪರೀಕ್ಷೆ:

ರಾಜ್ಯದ ಲ್ಲಿ ಎಸ್ ಎಸ್ ಎಲ್ ಸಿ ಗೆ 8 ಲಕ್ಷ 75 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಎರಡು ದಿನ ಪರೀಕ್ಷೆ ಮಾಡುತ್ತೇವೆ. ವಿಜ್ಞಾನ. ಗಣಿತ ಹಾಗೂ ಸಮಾಜ ವಿಜ್ಞಾನ ಪರೀಕ್ಷೆ ಮಾಡುತ್ತೇವೆ. ಬಹು ಆಯ್ಕೆ ಪ್ರಶ್ನೆಗಳು ಅತ್ಯಂತ ಸರಳವಾಗಿರುತ್ತವೆ. ಹಿಂದಿ, ಕನ್ನಡ ಹಾಗೂ ಇಂಗ್ಲೀಷ್ ಭಾಷೆಯನ್ನು ಸೇರಿಸಿ ಒಂದು ಪರೀಕ್ಷೆ ಮಾಡಲಾಗುವುದು ಎಂದು ಹೇಳಿದರು.

ಜುಲೈ ಮೂರನೇ ವಾರ ಎಸ್ ಎಸ್ ಎಲ್ ಸಿ ಪರೀಕ್ಷೆ ಮಾಡುತ್ತೇವೆ. ಪರೀಕ್ಷೆಯ ದಿನಾಂಕವನ್ನು 20 ದಿನ ಮೊದಲೇ ವಿದ್ಯಾರ್ಥಿ ಗಳಿಗೆ ತಿಳಿಸಲಾಗುವುದು ಎಂದರು.

Copyright © All rights reserved Newsnap | Newsever by AF themes.
error: Content is protected !!