ಮುಂಬರುವ ಮಾರ್ಚ್- ಏಪ್ರಿಲ್‌ನಲ್ಲಿ ನಡೆಯಲಿರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ಹಳೆಯ ಮಾದರಿಯ ಪ್ರಶ್ನೆ ಪತ್ರಿಕೆಯಂತೆ ನಡೆಸಲಿದ್ದೇವೆ ಎಂದು ಎಸ್‌ಎಸ್‌ಎಲ್‌ಸಿ ಬೋರ್ಡ್ ನಿರ್ದೇಶಕಿ ಸುಮಂಗಲ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಸುಮಂಗಲ ಈ ವರ್ಷದಂತೆ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಮಾದರಿ ಇರುವುದಿಲ್ಲ. ಬದಲಿಗೆ ಹಳೆಯ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆ ಇರಲಿದೆ. ಕಳೆದ ವರ್ಷ ಕೊರೊನಾ ಹಿನ್ನೆಲೆಯಲ್ಲಿ ಬಹು ಆಯ್ಕೆ ವಿಧಾನದಲ್ಲಿ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗಿತ್ತು ಎಂದರು.
ಕಳೆದ ಬಾರಿ ಪ್ರತಿ ವಿಷಯಕ್ಕೆ 40 ಅಂಕದ ಪ್ರಶ್ನೆ ಪತ್ರಿಕೆಯನ್ನು ಬೋರ್ಡ್ ಸಿದ್ಧಪಡಿಸಿತ್ತು. ಎರಡು ಪ್ರಶ್ನೆ ಪತ್ರಿಕೆ 3 ವಿಷಯ ಸೇರಿ ಒಂದು ಪೇಪರ್‌ಗೆ ತಲಾ 120 ಅಂಕಗಳು ಇತ್ತು. ಎಲ್ಲವೂ ಬಹು ಆಯ್ಕೆ ಮಾದರಿಯಲ್ಲಿ ಪ್ರಶ್ನೆಗಳು ಇದ್ದವು. ಎರಡು ದಿನ ಪರೀಕ್ಷೆ ನಡೆದ ಹಿನ್ನೆಲೆಯಲ್ಲಿ ಸರಳ ಪ್ರಶ್ನೆ ಪತ್ರಿಕೆ ಸಿದ್ಧತೆ ಮಾಡಿದ್ದರು. ಆದರೆ ಈ ವರ್ಷ ಬಹು ಆಯ್ಕೆ ಪ್ರಶ್ನೆ ಪತ್ರಿಕೆ ಮಾದರಿ ಇರುವುದಿಲ್ಲ ಎಂದು ಮಾಹಿತಿ ನೀಡಿದರು.
ಈ ವರ್ಷ ವಿಸ್ತೃತ ಉತ್ತರ ಬರೆಯುವ ಹಳೆಯ ಪದ್ಧತಿಯನ್ನೇ ಮತ್ತೆ ಜಾರಿಗೊಳಿಸಲಾಗಿದೆ. ಪ್ರಥಮ ಭಾಷೆ ಪರೀಕ್ಷೆಗೆ 125 ಅಂಕ, ಉಳಿದ ವಿಷಯಗಳಿಗೆ 100 ಅಂಕಗಳು ಇರುತ್ತದೆ. ವಿದ್ಯಾರ್ಥಿಗಳು ಹಳೆಯ ಮಾದರಿಯಂತೆ ವಿವರವಾಗಿ ಉತ್ತರಗಳನ್ನು ಬರೆಯಬೇಕು. ಪ್ರಥಮ ಭಾಷೆ ವಿಷಯಕ್ಕೆ 125 ಅಂಕದಲ್ಲಿ 120 ಅಂಕ ಬರವಣಿಗೆ, ಆಂತರಿಕ ಮೌಲ್ಯಮಾಪನಕ್ಕೆ 25 ಅಂಕ ಹಾಗೂ ಉಳಿದ ವಿಷಯಗಳಿಗೆ 80 ಅಂಕ ಬರವಣಿಗೆ 20 ಆಂತರಿಕ ಮೌಲ್ಯಮಾಪನ ಅಂಕಗಳು ಇರುತ್ತವೆ ಎಂದು ತಿಳಿಸಿದರು.
- MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
- ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
- ಆಸ್ಪತ್ರೆಯಲ್ಲಿ ಬೆಂಕಿ ಅವಘಡ: 10 ಮಕ್ಕಳು ಸಜೀವ ದಹನ
- ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
- ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ
More Stories
MUDA ಹಗರಣ: 15,085 ನಿವೇಶನಗಳು ಪೆಂಡಿಂಗ್, ಹಲವಾರು ಅಕ್ರಮ ಬಯಲು
ರಾಜ್ಯ ಸರ್ಕಾರದಿಂದ 7 ಐಪಿಎಸ್ ಅಧಿಕಾರಿಗಳ ವರ್ಗಾವಣೆ
ಕರ್ನಾಟಕದಲ್ಲಿ 6 ಲಕ್ಷ ಎಕರೆ ವಕ್ಫ್ ಆಸ್ತಿಗೆ ಪರಿಗಣನೆ: ಬಿಜೆಪಿ ಶಾಸಕ ಯತ್ನಾಳ್ ಆರೋಪ