ಕೊರೋನಾ ಸಂಕಷ್ಟ ಕಾಲದಲ್ಲಿ ಶ್ರೀರಂಗಪಟ್ಟಣ ತಾಲೂಕಿನ ಬಡ ಜನರ ಉಪಯೋಗಕ್ಕೆ 25 ಸಾವಿರ ಕುಟುಂಬಗಳಿಗೆ ಪುಡ್ ಕಿಟ್ ಬೃಹತ್ ವಿತರಣಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಕೊರೋನಾ ಎರಡನೇ ಹಾವಳಿಯಿಂದ ನಲುಗಿ ಹೋಗಿರುವ ಬಡವರ ಜೀವನಕ್ಕೆ ನೆರವಾಗಲು ಶ್ರೀರಂಗಪಟ್ಟಣ ಶಾಸಕ ರವೀಂದ್ರ ಶ್ರೀಕಂಠಯ್ಯ 25 ಸಾವಿರ ಕುಟುಂಬಗಳಿಗೆ ತಲಾ 5 ಕೆಜಿ ಅಕ್ಕಿ, ತರಕಾರಿ. ಪೌಷ್ಟಿಕ ಆಹಾರ ವಿತರಣೆಗೆ ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಬುಧವಾರ ಚಾಲನೆ ನೀಡಿದರು.
ಶ್ರೀರಂಗಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗ ಬಡವರಿಗೆ ಪುಡ್ ಕಿಟ್ ವಿತರಣೆ ಚಾಲನೆ ನೀಡಿ ಮಾತನಾಡಿದ ಕುಮಾರಸ್ವಾಮಿ, ಬಡವರ ಜೀವ ಜೀವನ ಉಳಿಸುವ ಕೆಲಸವನ್ನು ಶಾಸಕ ರವೀಂದ್ರ ಶ್ರೀಕಂಠಯ್ಯ ಅವರು ಶ್ರೀರಂಗಪಟ್ಟಣ ಕ್ಷೇತ್ರ ದಿಂದ ಆರಂಭಿಸಿರುವುದು ನಿಜಕ್ಕೂ ಸಾರ್ಥಕ ಕೆಲಸ ಎಂದು ಬೆನ್ನು ತಟ್ಟಿದರು.
ಕೊರೋನಾ ಭೀಕರವಾಗಿದೆ. ಈ ದೇಶ, ರಾಜ್ಯದ ಪ್ರತಿಯೊಬ್ಬರ ಜೀವವೂ ಅಮೂಲ್ಯವಾಗಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ಈ ಮೂಲಕ ಮಾಹಾಮಾರಿನ್ನು ಎದುರಿಸಬೇಕು ಎಂದು ಕರೆ ನೀಡಿದರು.
ಪ್ರಾರಂಭದಲ್ಲಿ ಮಾತನಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ ಮಾತನಾಡಿ ತಾಲೂಕಿನ 25 ಸಾವಿರ ಬಡವರನ್ನು ಗುರುತಿಸಿದ್ದೇವೆ. ಎಲ್ಲರಿಗೂ ಮನೆ ಬಾಗಿಲಿಗೆ ಪುಢ್ ಕಿಟ್ ತಲುಪಿಸುವ ವ್ಯವಸ್ಥೆ ಮಾಡಿದ್ದೇವೆ ಎಂದರು
ಈ ದಿನ ಶ್ರೀರಂಗಪಟ್ಟಣ ತಾಲೂಕು ಆಸ್ಪತ್ರೆ ಯ ಫ್ರಂಟ್ ಲೈನ್ ವಾರಿಯರ್ಸ್ ಗಳಾದ ದಾದಿಯರು, ಡಿ ಗ್ರೂಪ್ ನೌಕರರು , ಆಸ್ಪತ್ರೆ ಸಿಬ್ಬಂದಿ ಗಳಿಗೆ ಪುಡ್ ಕಿಟ್ ಜೊತೆ ಒಂದು ಆರ್ಥಿಕ ನೆರವು ನೀಡಿದ್ದೇವೆ. ಆರೋಗ್ಯ ಇಲಾಖೆಯ ನೌಕರರ ಸೇವೆ ಅತ್ಯಂತ ಶ್ಲಾಘನೀಯ ಎಂದರು.
ದೇವಸ್ಥಾನದ ಆವರಣದಲ್ಲಿ ಸಾವಿರಾರು ಕೆಜಿ ತರಕಾರಿ, ಅಕ್ಕಿ ಸೇರಿಂತೆ ಅಗತ್ಯ ವಸ್ತುಗಳನ್ನು ಬಡ ಜನರಿಗೆ ತಲುಪಿಸುವ ವ್ಯವಸ್ಥೆ ಮಾಡಲಾಗಿತ್ತು.
ಕೊವಿಡ್ ನಿಯಮಗಳ ಪಾಲನೆಗೆ ಹೆಚ್ಚಿನ ನಿಗಾ ಇಡಲಾಗಿತ್ತು.
ಕಾರ್ಯಕ್ರಮದಲ್ಲಿ ಶಾಸಕ ಸುರೇಶ್ ಗೌಡ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ ರಮೇಶ್ ಸೇರಿದಂತೆ ಇತರರು ಪಾಲ್ಗೊಂಡಿದ್ದರು.
More Stories
ನವೆಂಬರ್ 28: ರಾಜ್ಯದ ಅಭಿವೃದ್ಧಿಗೆ ಮಹತ್ವದ ಸಚಿವ ಸಂಪುಟ ಸಭೆ
ಇಂದಿನಿಂದ ಸಂಸತ್ತಿನ ಚಳಿಗಾಲದ ಅಧಿವೇಶನ: `ವಕ್ಫ್ ತಿದ್ದುಪಡಿ’ ಸೇರಿ 16 ಮಸೂದೆ ಮಂಡಿಸಲು ಸರ್ಕಾರ ಸಜ್ಜು!
KSRTC : ಪ್ರಯಾಣಿಕರು UPI ಮೂಲಕ ಟಿಕೆಟ್ ಖರೀದಿಸಲು ಅವಕಾಶ