December 20, 2024

Newsnap Kannada

The World at your finger tips!

srinivas prasad

ಚುನಾವಣಾ ರಾಜಕೀಯಕ್ಕೆ ಶ್ರೀನಿವಾಸ ಪ್ರಸಾದ್ ಗುಡ್‌ಬೈ

Spread the love

ಭವಿಷ್ಯದಲ್ಲಿ ಎದುರಾಗುವ ಯಾವುದೇ ಚುನಾವಣೆಯಲ್ಲಿ ತಾವು ಸ್ಪರ್ಧಿಸಿಸುವುದಿಲ್ಲ ಎಂದು ಹಿರಿಯ ರಾಜಕಾರಣಿ, ಹಾಲಿ ಸಂಸದ ಶ್ರೀನಿವಾಸ ಪ್ರಸಾದ್ ಅವರು ಘೋಷಿಸುವ ಮೂಲಕ ಚುನಾವಣಾ ರಾಜಕೀಯದಿಂದ ಹಿಂದೆ ಸರಿಯುವುದಾಗಿ ಪ್ರಕಟಿಸಿದ್ದಾರೆ.


ತಮ್ಮ ೭೫ನೇ ವರ್ಷದ ಹುಟ್ಟುಹಬ್ಬದಂದೇ ಮೈಸೂರಿನಲ್ಲಿ ಇಂದು ಈ ತೀರ್ಮಾನ ಪ್ರಕಟಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರ ನಿಲುವಿಗೆ ಈ ಮೂಲಕ ತಮ್ಮ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇದುವರೆಗೆ ನಾನು ೧೪ ಚುನಾವಣೆ ಎದುರಿಸಿದ್ದೇನೆ. ಈ ಹಿಂದಿನ ತಮ್ಮ ೧೨ನೇಚುನಾವಣೆಯೇ ಸಾಕು ಎನಿಸಿತ್ತು. ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಅವಧಿಯಲ್ಲಿ ಕಂದಾಯ ಸಚಿವನಾಗಿ ಅವಧಿ ಪೂರ್ಣಗೊಳಿಸಲು ಎರಡು ವರ್ಷ ಅವಕಾಶ ನೀಡಿದ್ದರೆ ಸಾಕಾಗಿತ್ತು. ಹಾಗೆಯೇ ಅದೇ ನನ್ನ ಕಡೆಯ ಚುನಾವಣೆಯೂ ಆಗುತ್ತಿತ್ತು. ಆದರೆ ಬದಲಾದ ರಾಜಕೀಯ ವಾತಾವರಣದಿಂದಾಗಿ ತಮ್ಮ ನಿರ್ಧಾರ ಬದಲಿಸಿ ಇನ್ನೆರಡು ಚುನಾವಣೆ ಎದುರಿಸುವಂತಾಯಿತು ಎಂದು ವಿಶ್ಲೇಷಿಸಿದ್ದಾರೆ.


ಆರು ಬಾರಿ ಸಂಸದರಾಗಿರುವ ಪ್ರಸಾದ್ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ. ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜಯಗಳಿಸಿ ಸಚಿವರಾಗಿದ್ದರು. ಬಿ.ಎಸ್. ಯಡಿಯೂರಪ್ಪ ಅವರು ಎರಡು ವರ್ಷಗಳ ಹಿಂದೆ ಮುಖ್ಯಮಂತ್ರಿಯಾಗುವ ಸಮಯದಲ್ಲೇ ಪ್ರಸಾದ ಮೈಸೂರು ನಿವಾಸ ಒಂದು ರೀತಿಯ ರಾಜಕೀಯ ಶಕ್ತಿ ಕೇಂದ್ರವಾಗಿಯೂ ಪರಿವರ್ತಿತವಾಗಿತು.

ಇತ್ತೀಚಿನ ಹಲವು ಸಂದರ್ಭದಲ್ಲಿ ಮಾಜಿ ಸಚಿವ ಎಚ್. ವಿಶ್ವನಾಥ್ ಸೇರಿದಂತೆ ಹಲವು ರಾಜಕೀಯ ನಾಯಕರು ಇಲ್ಲಿಗೆ ಭೇಟಿ ನೀಡಿ ರಾಜಕೀಯ ಮಾತುಕತೆ ನಡೆಸಿರುವುದು ಈಗ ಇತಿಹಾಸ.

Copyright © All rights reserved Newsnap | Newsever by AF themes.
error: Content is protected !!