November 16, 2024

Newsnap Kannada

The World at your finger tips!

e5768555 7b7c 4401 a7ea 0b20067a1676

ಗೆಲುವಿನ ನಗೆ ಬೀರಿದ ಎಸ್ ಆರ್ ಎಸ್ : ಆರ್ ಸಿ ಬಿ ಗೆ ಕಂಟಕ

Spread the love

ಐಪಿಎಲ್ 20-20ಯ 50ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ, ಸನ್ ರೈಸರ್ಸ್ ಆಫ್ ಹೈದರಾಬಾದ್ ತಂಡ ರೋಚಕ ಗೆಲುವನ್ನು ಸಾಧಿಸಿತು.

ದುಬೈನ ಶಾರ್ಜಾ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಎಸ್‌ಆರ್‌ಹೆಚ್ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.

ಆರ್‌ಸಿಬಿ ತಂಡದಿಂದ ಆರಂಭಿಕ ಆಟಗಾರರಾಗಿ ಫೀಲ್ಡಿಗಿಳಿದ ಜೆ. ಫಿಲಿಪ್ ಹಾಗೂ ದೇವದತ್ ಪಡಿಕ್ಕಲ್ ಅವರ ಆಟ ಅಭಿಮಾನಿಗಳಿಗೆ ನಿರಾಸೆ ಮೂಡಿಸಿತು. ಫಿಲಿಪ್ 31 ಎಸೆತಗಳಿಗೆ 32 ರನ್ ಗಳಿಸಿದರೆ, ಪಡಿಕ್ಕಲ್ 8 ಎಸೆತಗಳಿಗೆ 5 ರನ್‌ಗಳ ಮೊತ್ತವನ್ನು ತಂಡಕ್ಕೆ ನೀಡಿದರು. ಆದರೆ ನಿರೀಕ್ಷಿತ ಆಟಗಾರರಾದ ವಿರಾಟ್‌ ಕೊಹ್ಲಿ ಅವರ ಆಟ ಆಕರ್ಷಕವಾಗಿರಲಿಲ್ಲ. ಕೊಹ್ಲಿ 14 ಎಸೆತಗಳಿಗೆ ಕೇವಲ 9 ರನ್ ಗಳಿಸಿದರು. ನಂತರ ಬಂದ ಎಬಿ ಡೀ ವಿಲಿಯರ್ಸ್ 24 ಎಸೆತಗಳಿಗೆ 24 ರನ್ ಗಳಿಸಿದರು. ಆರ್‌ಸಿಬಿ ತಂಡ‌ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 120 ರನ್‌ಗಳನ್ನು ಮಾತ್ರ ಗಳಿಕೆ ಮಾಡಿತು.

ಆರ್‌ಸಿಬಿ ನೀಡಿದ ಸರಳ ಗುರಿಯನ್ನು ಎಸ್‌ಆರ್‌ಹೆಚ್ ತಂಡ ಸುಲಭವಾಗಿ‌ ಸಾಧಿಸಿತು. ಎಸ್‌ಆರ್‌ಹೆಚ್ ನೀಡಿದ ಗುರಿಯನ್ನು ಸುಲಭವಾಗಿ ಪೂರೈಸಿತು. ಎಸ್‌ಆರ್‌ಹೆಚ್ ತಂಡದಿಂದ ಡಿ. ವಾರ್ನರ್ ಹಾಗೂ ವೃದ್ಧಿಮಾನ್ ಸಹಾ ಮೈದಾನಕ್ಕಿಳಿದು ಆಟಕ್ಕೆ ಸಾಧಾರಣ ಆರಂಭ ನೀಡಿದರು. ವಾರ್ನರ್ 5 ಎಸೆತಗಳಿಗೆ 8 ರನ್ ಗಳಿಸಿದರೆ, ಸಹಾ 32 ಎಸೆತಗಳಿಗೆ 39 ರನ್ ಗಳಿಸಿದರು. ನಂತರ ಬಂದ ಮನೀಶ್ ಪಾಂಡೆ ಮತ್ತು ಜೆ.‌ಹೋಲ್ಡರ್ ಅವರು ಕ್ರಮವಾಗಿ 19 ಎಸೆತಗಳಿಗೆ 26 ರನ್ ಹಾಗೂ 10 ಎಸೆತಗಳಿಗೆ 26 ರನ್ ಗಳಿಸಿದರು. ಎಸ್‌ಆರ್‌ಹೆಚ್ ತಂಡ 14.1 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿ ಪಂದ್ಯದಲ್ಲಿ ಗೆಲುವಿನ‌ ಗರಿಯನ್ನು ತನ್ನದಾಗಿಸಿಕೊಂಡಿತು.

Copyright © All rights reserved Newsnap | Newsever by AF themes.
error: Content is protected !!