ಸಂಗೀತ ಮಾಂತ್ರಿಕ ಎಸ್‌ಪಿಬಿಯವರ ಮರಣಾನಂತರ ಅವರಿಗೆ ಚಿಕಿತ್ಸೆ ನೀಡಿದ್ದ ಎಂಜಿಎಂ ಆಸ್ಪತ್ರೆಯು 3 ಕೋಟಿ ಬಿಲ್ ಪಾವತಿಸುವಂತೆ ಹೇಳಿದೆ ಎಂಬ ಸುಳ್ಳು ಸುದ್ದಿಗಳು ಹರಡಿದ್ದವು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿರುವ ಎಸ್‌ಪಿಬಿ ಪುತ್ರ ಚರಣ್ ‘ತಂದೆಯ ಸಾವಿನ ನಂತರ ಆಸ್ಪತ್ರೆಯ ಬಿಲ್ ಬಗ್ಗೆ ನಾನು ಕೇಳಿದೆ. ಆದರೆ ಆಸ್ಪತ್ರೆಯ ಸಿಬ್ಬಂದಿಗಳು ಬಿಲ್‌ನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ’ ಎಂದು ಹೇಳಿದ್ದಾರೆ.
ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಬಿಲ್‌ನ್ನು ಪಾವತಿಸಲು ಮುಂದೆ ಬಂದರು, ಆಸ್ಪತ್ರೆಯ ಬಿಲ್ ಪಾವತಿಸಲು ಎಸ್‌ಪಿಬಿ ಪುತ್ರ ಚರಣ್ ತಮಿಳು ಸರ್ಕಾರದ ಮೊರೆ ಹೋದರೂ ಸರ್ಕಾರ ಸರಿಯಾಗಿ ಪ್ರತಿಕ್ರಿಯೆ ನೀಡಿಲ್ಲ ಎಂಬ ಪುಕಾರುಗಳು ಹರಡಿದ್ದವು.
‘ಆಸ್ಪತ್ರೆಯವರನ್ನು, ತಂದೆಯ ಮರಣಾನಂತರ ಬಿಲ್ ಎಷ್ಟಾಯಿತು ಎಂದು ಕೇಳಿದಾಗ ಆಸ್ಪತ್ರೆ ಸಿಬ್ಬಂದಿಯು ಬಿಲ್ ಸ್ವಿಕಾರ ಮಾಡಲಿಲ್ಲ. ಆಸ್ಪತ್ರೆಯ ಆಡಳಿತ ಮಂಡಳಿಯು ಎಸ್‌ಪಿಬಿಯವರ ಬಿಲ್‌ನ್ನು ಸ್ವೀಕಾರ ಮಾಡದಂತೆ ಸೂಚನೆ ನೀಡಿತ್ತು’ ಎಂದು ಚರಣ್ ಅವರು ತಿಳಿಸಿದರು.
More Stories
2025ರಿಂದ ಕ್ಯಾನ್ಸರ್ ಲಸಿಕೆ ಉಚಿತ ವಿತರಣೆ: ಮಹತ್ವದ ವೈದ್ಯಕೀಯ ಸಾಧನೆ
ವಿರೋಧ ಲೆಕ್ಕಿಸದ ಮೋದಿ ಸರ್ಕಾರ
ಒಂದು ದೇಶ, ಒಂದು ಚುನಾವಣೆ ಮಸೂದೆ ಲೋಕಸಭೆಯಲ್ಲಿ ಮಂಡನೆ