February 21, 2026

Newsnap Kannada

The World at your finger tips!

ಎಸ್‌ಪಿ ಶೋಭಾ ಕಟಾವ್ಕರ್

ಎಸ್‌ಪಿ ಶೋಭಾ ಕಟಾವ್ಕರ್ ಮನೆಯಲ್ಲೇ ಅನುಮಾನಾಸ್ಪದ ಸಾವು

Spread the love

ಇತ್ತೀಚೆಗೆ ಎಸ್‌ಪಿಯಾಗಿ ಮುಂಬಡ್ತಿ ಪಡೆದು ವರ್ಗಾವಣೆಗೊಂಡಿದ್ದ ಶೋಭಾ ಕಟಾವ್ಕರ್(53) ತಮ್ಮ ಮನೆಯಲ್ಲಿಅನುಮಾಸ್ಪದವಾಗಿ ಸಾವನ್ನಪ್ಪಿದ್ದಾರೆ

ಮನೆಯ ಸದಸ್ಯರೆಲ್ಲರೂ ಹಾಸನಕ್ಕೆ ತೆರಳಿದ್ದರು. ಸದಸ್ಯರು ತೆರಳಿದ್ದರೂ ಪುಟ್ಟೇನಹಳ್ಳಿಯ ನಿವಾಸದಲ್ಲಿ ಶೋಭಾ ಇಂದು ಒಬ್ಬರೇ ಇದ್ದರು. ಹೃದಯಾಘಾತದಿಂದ ಸಾವನ್ನಪ್ಪಿರುವ ಶಂಕೆಯೂ ವ್ಯಕ್ತವಾಗಿದೆ.

ಶೋಭಾ ಕಟಾವ್ಕರ್ ಕಲಬುರಗಿಯ ಪಿಟಿಸಿ ಉಪ ಪ್ರಾಂಶುಪಾಲರಾಗಿ ನಿಯೋಜನೆಗೊಂಡಿದ್ದರು.ಇದೀಗ ಪುಟ್ಟೇನಹಳ್ಳಿ ಪೊಲೀಸರು ಇದನ್ನು ಅಸಹಜ ಸಾವೆಂದು ಪರಿಗಣಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ

ಮನೆಯ ಸದಸ್ಯರು ಇಂದು ಸಂಜೆ ಕಟಾವ್ಕರ್‌ಗೆ ಕರೆ ಮಾಡಿದ್ದಾಗ ಅವರು ಫೋನ್ ರಿಸೀವ್ ಮಾಡಿರಲಿಲ್ಲ.

ಹೀಗಾಗಿ ಮನೆಯ ಸೆಕ್ಯುರಿಟಿಗೆ ಪರಿಶೀಲಿಸಲು ಸೂಚಿಸಿದ್ದರು. ರಾತ್ರಿ 8 ಗಂಟೆಯ ವೇಳೆ ಮನೆಯನ್ನು ಸೆಕ್ಯೂರಿಟಿ ಮನೆಯನ್ನು ಪರಿಶೀಲಿಸಿದಾಗ ಕಟಾವ್ಕರ್ ಸಾವನ್ನಪ್ಪಿರುವುದು ಪತ್ತೆಯಾಗಿದೆ.

error: Content is protected !!