ಎಸ್‍ಪಿ ಮುಖ್ಯಸ್ಥ ಮುಲಾಯಂ ಸೊಸೆ ಅಪರ್ಣಾ ಯಾದವ್ ಬಿಜೆಪಿಗೆ?

Team Newsnap
1 Min Read

ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ಭಾರೀ ರಾಜಕೀಯ ಬೆಳವಣಿಗೆ ನಾಂದಿ ಹಾಡಿವೆ.

ಮಾಜಿ ಮುಖ್ಯಮಂತ್ರಿ ಮುಲಾಯಂ ಸಿಂಗ್ ಯಾದವ್ ಅವರ ಕಿರಿಯ ಸೊಸೆ ಅಪರ್ಣಾ ಯಾದವ್ ಬಿಜೆಪಿ ಸೇರುವ ಸಾಧ್ಯತೆ ಇದೆ.

ಮುಲಾಯಂ ಸಿಂಗ್ ಅವರ ಕಿರಿಯ ಪುತ್ರ ಪ್ರತೀಕ್ ಯಾದವ್ ಅವರ ಪತ್ನಿ ಅಪರ್ಣಾ ಯಾದವ್ ಅವರು ಬಿಜೆಪಿ ಪಕ್ಷಕ್ಕೆ ಸೇರಬಹುದು ಎಂಬ ಗಾಳಿ ಸುದ್ದಿ ಹರಿದಾಡುತ್ತಿದೆ. 

2017ರ ಉತ್ತರ ಪ್ರದೇಶ ಲಕ್ನೋ ಕ್ಯಾಂಟ್‌ ಕ್ಷೇತ್ರದಲ್ಲಿ ಅಪರ್ಣಾ ಸ್ಪರ್ಧಿಸಿ ಬಿಜೆಪಿಯ ರೀಟಾ ಬಹುಗುಣ ಜೋಶಿ ವಿರುದ್ಧ ಸೋತಿದ್ದರು.

ರಾಮ ಮಂದಿರ ನಿರ್ಮಾಣಕ್ಕೆ 11 ಲಕ್ಷ ರೂಪಾಯಿ ದೇಣಿಗೆ ನೀಡುವುದರಿಂದ ಹಿಡಿದು ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ)ವರೆಗೂ ಅಪರ್ಣಾ ಅವರು ಬಿಜೆಪಿ ಮತ್ತು ಕೇಂದ್ರ ಸರ್ಕಾರದ ನೀತಿಗಳನ್ನು ಬಹಿರಂಗವಾಗಿಯೇ ಬೆಂಬಲಿಸಿದ್ದಾರೆ.

ರಾಮಮಂದಿರ ನಿರ್ಮಾಣಕ್ಕೆ 11 ಲಕ್ಷ ರೂಪಾಯಿ ದೇಣಿಗೆ ನೀಡುವ ವೇಳೆ, ನಾನು ಸ್ವಯಂ ಪ್ರೇರಣೆಯಿಂದ ಈ ದೇಣಿಗೆ ನೀಡಿದ್ದೇನೆ.

ಮಹಾನ್ ಪುರುಷ ರಾಮ, ಭಾರತದ ಸಂಸ್ಕೃತಿ ಮತ್ತು ನಂಬಿಕೆಯ ಕೇಂದ್ರ. ಪ್ರತಿಯೊಬ್ಬ ಭಾರತೀಯರು ರಾಮ ಮಂದಿರಕ್ಕೆ ದೇಣಿಗೆ ನೀಡಬೇಕು ಎಂದು ಹೇಳಿದ್ದರು.ಈ ಎಲ್ಲಾ ಕಾರಣಗಳು ಅಪಣಾ೯ ಬಿಜೆಪಿಗೆ ಸೇರುವ ವಂದತಿಗಳನ್ನು ಪುಷ್ಠಿ ನೀಡಿವೆ.

Share This Article
Leave a comment