ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವ ಗಣ್ಯರಿಗೆ ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ವೇಳೆ ವಿವಿಧ ಪ್ರಶಸ್ತಿ ಪುರಸ್ಕಾರಗಳನ್ನು ಘೋಷಣೆ ಮಾಡಿದೆ.
ಪದ್ಮ ವಿಭೂಷಣ :
ಜಪಾನ್ನ ಶಿಂಜೊ ಅಬೆ (ಸಾರ್ವಜನಿಕ ಕ್ಷೇತ್ರ), ಎಸ್.ಪಿ. ಬಾಲಸುಬ್ರಹ್ಮಣ್ಯಂ (ಕಲೆ), ಡಾ. ಬೆಳ್ಳೆ ಮೋನಪ್ಪ ಹೆಗ್ಡೆ (ಬಿ.ಎಂ. ಹೆಗ್ಡೆ ವೈದ್ಯಕೀಯ ಕ್ಷೇತ್ರ), ಮೌಲಾನಾ ವಹಿದುದೀನ್ ಖಾನ್ (ಆಧ್ಯಾತ್ಮ ವಿಭಾಗ), ಬಿ.ಬಿ. ಲಾಲ್ (ಪುರಾತತ್ವ ಶಾಸ್ತ್ರ ವಿಭಾಗ) ಹಾಗೂ ಒಡಿಶಾದ ಸುದರ್ಶನ್ ಸಾಹೊ (ಕಲೆ) ಅವರಗೆ ಪದ್ಮ ವಿಭೂಷಣ ಪ್ರಶಸ್ತಿ ಘೋಷಿಸಿದೆ.
ಪದ್ಮ ಭೂಷಣ:
10 ಸಾಧಕರಿಗೆ ಪ್ರತಿಷ್ಠಿತ ಪದ್ಮಭೂಷಣ ಪ್ರಶಸ್ತಿ ಘೋಷಣೆ ಮಾಡಲಾಗಿದೆ.
ಜ್ಞಾನಪೀಠ ಪುರಸ್ಕೃತ ಸಾಹಿತಿ ಚಂದ್ರಶೇಖರ ಕಂಬಾರ, ರಾಮ್‌ವಿಲಾಸ್ ಪಾಸ್ವಾನ್, ಮಾಜಿ ಸ್ಪೀಕರ್ ಸುಮಿತ್ರಾ ಮಹಾಜನ್‌ಗೆ ಪದ್ಮಭೂಷಣ
ಪದ್ಮಶ್ರೀ :
ದೇಶದ 102 ಸಾಧಕರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಘೋಷಣೆಯಾಗಿದೆ.
ಕರ್ನಾಟಕದ ಮೂವರಿಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿದೆ. ಆರ್.ಲಕ್ಷ್ಮೀನಾರಾಯಣ ಕಶ್ಯಪ್ (ಶಿಕ್ಷಣ), ಬಿ.ಮಂಜಮ್ಮ ಜೋಗತಿ (ಕಲೆ), ಕೆ.ವೈ.ವೆಂಕಟೇಶ್ (ಕ್ರೀಡೆ) ಕ್ಷೇತ್ರದಿಂದ ಪದ್ಮಶ್ರೀಗೆ ಆಯ್ಕೆಯಾಗಿದ್ದಾರೆ.
ಪೊಲೀಸ್ ಮೆಡಲ್
ಪೊಲೀಸ್ ಮೆಡಲ್ ಫಾರ್ ಮೆರಿಟೋರಿಯಸ್ ಸರ್ವೀಸ್ಗೆ ಕರ್ನಾಟಕದಿಂದ 19 ಮಂದಿ ಪೊಲೀಸರು ಆಯ್ಕೆಯಾಗಿದ್ದಾರೆ.
IGP ಡಾ. ಸುಬ್ರಮಣ್ಯೇಶ್ವರ ರಾವ್ ಅಯ್ಯಂಕಿ, SP ಬಾಬಾಸಾಬ್ ಶಿವಗೌಡ ನೆಮಗೌಡ್, DYSPಗಳಾದ ಬಸವಣ್ಣಪ್ಪ ರಾಮಚಂದ್ರ, ಅಶೋಕ ಡಿ, ಸಿ. ಬಾಲಕೃಷ್ಣ, ವಾಸುದೇವ್ ವಿ.ಕೆ., CI ಬಾಲಚಂದ್ರ ನಾಯ್ಕ್, ACIಗಳಾದ ಹೊನ್ನಗಂಗಯ್ಯ ಈಶ್ವರಯ್ಯ, ಪ್ರಕಾಶ್, ಪೊಲೀಸ್ ಅಧಿಕಾರಿ ಬಸವಯ್ಯ ಪುಟ್ಟಸ್ವಾಮಿ, ರಿಸರ್ವ್ SIಗಳಾದ ವೆಂಕಟೇಶ್, ಮೋಹನ್ರಾಜು ಕುರುಡಗಿ, ವೆಂಕಟಸ್ವಾಮಿ ಚಿನ್ನಪ್ಪ, ಜೀತೇಂದ್ರ ಕುಡುಕಾಡಿ ರಾಧಾಕೃಷ್ಣ ರೈ, ಶಶಿಕಕುಮಾರ್, ಸಶಸ್ತ್ರ ಪಡೆಯ ಮುಖ್ಯ ಪೇದೆ ರಾಮಚಂದ್ರ ಲೋಕೇಶ್, ಮುಖ್ಯ ಪೇದೆ ಶ್ರೀ ಉಸ್ಮಾನ್ ಸಾಬ್, ಸತೀಶ್ ಕೆಂಪಯ್ಯ ವೆಂಕಟಪ್ಪ ಹಾಗೂ ಪ್ರಕಾಶ್ ಶೆಟ್ಟಿ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪೊಲೀಸ್ ಮೆಡಲ್ ಪಡೆಯಲಿದ್ದಾರೆ.
- ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್
- ಕೊಡಗಿನಲ್ಲಿ ನಿರ್ಮಾಣಗೊಳ್ಳಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
- KSRTC ಬಸ್-ಲಾರಿ ನಡುವೆ ಡಿಕ್ಕಿ: ಐವರು ಸ್ಥಳದಲ್ಲೇ ಸಾವು
- ವರದಕ್ಷಿಣೆ ಕಿರುಕುಳ ತಾಳಲಾರದೇ ಮಹಿಳೆ ಆತ್ಮಹತ್ಯೆ – ಪತಿ ವಿಷ ಸೇವಿಸಿ ಆತ್ಮಹತ್ಯೆ ಯತ್ನ
- ತಿರುಪತಿಯಲ್ಲಿ ಕಾಲ್ತುಳಿತ: 6 ಮಂದಿ ಸಾವು, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ
More Stories
ಲೋಕಾಯುಕ್ತ ಬಲೆಗೆ ಬಿದ್ದ ನಗರಸಭೆ ಆಯುಕ್ತ ಮತ್ತು ಸಹಾಯಕ ಕಾರ್ಯಪಾಲಕ ಇಂಜಿನಿಯರ್
ಕೊಡಗಿನಲ್ಲಿ ನಿರ್ಮಾಣಗೊಳ್ಳಲಿದೆ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ
KSRTC ಬಸ್-ಲಾರಿ ನಡುವೆ ಡಿಕ್ಕಿ: ಐವರು ಸ್ಥಳದಲ್ಲೇ ಸಾವು