February 22, 2026

Newsnap Kannada

The World at your finger tips!

sowmy reddy

ಸಚಿವರ ಚಾರಿತ್ರ್ಯ ಸವಾಲು ಹೇಳಿಕೆಗೆ ಬಿದ್ದು ಬಿದ್ದು ನಕ್ಕ ಶಾಸಕಿ ಸೌಮ್ಯ ರೆಡ್ಡಿ

Spread the love

ನಾಯಕರ ಚಾರಿತ್ರ್ಯ ಬಗ್ಗೆ ಸವಾಲು ಹಾಕಿರುವ ಸಚಿವ ಸುಧಾಕರ್ ಹೇಳಿಕೆಗೆ ಶಾಸಕಿ ಸೌಮ್ಯ ರೆಡ್ಡಿ ಬಿದ್ದು ಬಿದ್ದು ನಕ್ಕಿದ್ದಾರೆ .‌

ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ವಿಪಕ್ಷ ನಾಯಕರು ಹಾಗೂ ಕಾಂಗ್ರೆಸ್​, ಜೆಡಿಎಸ್​ ವಿಧಾನಸಭಾ ಸದಸ್ಯರ ವಿರುದ್ಧವೂ ತನಿಖೆಯಾಗಲಿ ಎಂದು ಸವಾಲು ಹಾಕಿದ್ದ ಆರೋಗ್ಯ ಸಚಿವ ಡಾ.ಕೆ ಸುಧಾಕರ್ ಅವರ ಹೇಳಿಕೆ ಕೇಳಿ ನನಗೆ ನಗು ತಡೆಯಲು ಆಗುತ್ತಿಲ್ಲ ಎಂದರು.

ವಿಧಾನಸೌಧದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಶಾಸಕಿ, ನಿಜವಾಗಲೂ ಹೇಳಿದ್ದರಾ.. ಎಂದು ಜೋರಾಗಿ ನಗು ಬೀರಿದರು.

ಸಚಿವರು ಕಾಮಿಡಿ ಮಾಡುತ್ತೀದ್ದರಾ..? ಹೌದಾ.. ಆದರೆ ನಾನು ಈ ಬಗ್ಗೆ ಮತ್ತೆ ಪ್ರತಿಕ್ರಿಯೆ ನೀಡುತ್ತೇನೆ ಎಂದರು

error: Content is protected !!