December 29, 2024

Newsnap Kannada

The World at your finger tips!

mobile fine

ಪಾಲಿಕೆ ನಿಯಮ ಉಲ್ಲಂಘಿಸಿ ಕಸ ಹಾಕಿದ ಮೊಬೈಲ್ ಮಳಿಗೆಗಳಿಗೆ ಬಿತ್ತು ದಂಡ

Spread the love

ಮೈಸೂರು ಮಹಾನಗರ ಪಾಲಿಕೆಯ ನಿಯಮವನ್ನು ಗಾಳಿಗೆ ತೂರಿ ಎಲ್ಲೆಂದರಲ್ಲಿ ಕಸ ಹಾಕಿದ ಎರಡು ಮೊಬೈಲ್ ಮಾರಾಟ ಮಳಿಗೆಗಳಿಗೆ ನಗರ ಪಾಲಿಕೆ ದಂಡ ವಿಧಿಸಿದೆ.

ಪ್ರಸ್ತುತ ಸ್ವಚ್ಛ ಸರ್ವೇಕ್ಷಣ್ 2021ರ ಸರ್ವೇಕಾರ್ಯಗಳ ಅಂಗವಾಗಿ ಪಾಲಿಕೆಯ ಆಯುಕ್ತರು ಸೇರಿದಂತೆ ಎಲ್ಲಾ ಅಧಿಕಾರಿಗಳು ಪ್ರತಿದಿನ ಬೆಳಿಗ್ಗೆ 7 ರಿಂದ 9 ಗಂಟೆಯವರಗೆ ನಗರದ ವಿವಿಧ ವಾರ್ಡ್‌ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

ಈ ವೇಳೆಯಲ್ಲಿ ಸೋಮವಾರ ಜೋನ್-3 ವ್ಯಾಪ್ತಿಗೆ ಒಳಪಡುವ ವಾರ್ಡ್‌- 47 ರ ಕುವೆಂಪುನಗರದ ಅಕ್ಷಯ ಭಂಡಾರ್‌ನಲ್ಲಿರುವ ಸಂಗೀತ ಹಾಗೂ ಪೂರ್ವಿಕ ಮೊಬೈಲ್ ಮಳಿಗೆಗಳ ಹೆಸರಿನ ಬಿಲ್‌ಗಳು, ಮೊಬೈಲ್ ಬಾಕ್ಸ್ ಸೇರಿದಂತೆ ಇನ್ನಿತರ ತ್ಯಾಜ್ಯವಸ್ತುಗಳನ್ನು ರಸ್ತೆಬದಿಯಲ್ಲಿ ಸುರಿಯಲಾಗಿತ್ತು.

ಪರಿಶೀಲನೆ ಸಂದರ್ಭದಲ್ಲಿ ಮೊಬೈಲ್ ಬಿಲ್‌ ಅನ್ನು ಗಮನಿಸಿದ ಅಧಿಕಾರಿಗಳು, ತ್ಯಾಜ್ಯವನ್ನು ವಾಪಸ್ಸು ಆಯಾ ಮಳಿಗೆಯ ಮುಂದೆ ಹಾಕಿದ್ದಾರೆ. ನಂತರ ಎರಡೂ ಮಳಿಗೆಗಳಿಗೂ 1 ಸಾವಿರ ರೂ. ದಂಡ ವಿಧಿಸಿ, ಇಂತಹ ಬೇಜಾವಬ್ದಾರಿತನ ಮರುಕಳಿಸಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಕಸ ಹಾಕಲೆಂದು ಪಾಲಿಕೆಯಿಂದ ನಿಗದಿತ ಸ್ಥಳ ಗುರುತಿಸಲಾಗಿದೆ. ಪ್ರತಿದಿನವೂ ಕಸ ವಿಲೇವಾರಿ ಮಾಡಲು ಪೌರಕಾರ್ಮಿಕ ಸಿಂಬಂಧಿಗಳು ಶ್ರಮವಹಿಸುತ್ತಾರೆ. ಆದರೆ ಕೆಲವರು ಎಲ್ಲೆಂದರಲ್ಲಿ ಕಸ ಹಾಕುವುದರಿಂದ ನಗರವನ್ನು ಸ್ವಚ್ಛವಾಗಿಡಲು ಸಾಧ್ಯವಿಲ್ಲ. ಹಾಗಾಗಿ ಇನ್ನು ಮುಂದೆ ಇಂತಹ ಘಟನೆ ನಡೆಯಬಾರದೆಂದು ಎರಡು ಮಳಿಗೆಗಳಿಗೆ ದಂಡ ವಿಧಿಸಲಾಗಿದೆ ಎಂದು ವಲಯ 3 ರ ಆಯುಕ್ತ ಟಿ.ಎಸ್.ಸತ್ಯಮೂರ್ತಿ ಅವರು ಮಾಹಿತಿ ನೀಡಿದರು.

Copyright © All rights reserved Newsnap | Newsever by AF themes.
error: Content is protected !!