February 22, 2026

Newsnap Kannada

The World at your finger tips!

b c nagesh

Recruitment of 15 thousand graduate primary teachers: Provisional selection list released - Minister Nagesh 15 ಸಾವಿರ ಪದವೀಧರ ಪ್ರಾಥಮಿಕ ಶಿಕ್ಷಕರ ನೇಮಕಾತಿ : ತಾತ್ಕಾಲಿಕ ಆಯ್ಕೆ ಪಟ್ಟಿ ಬಿಡುಗಡೆ - ಸಚಿವ ನಾಗೇಶ್

ಶೀಘ್ರದಲ್ಲೇ ಎಸ್ ಎಸ್ ಎಲ್ ಸಿ ಫಲಿತಾಂಶ ಪ್ರಕಟ: ಸಚಿವ ಬಿ.ಸಿ. ನಾಗೇಶ್

Spread the love

ಆದಷ್ಟು ಶೀಘ್ರದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟಿಸಲಾಗುವುದು ಎಂದು ನೂತನ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ.


ಯಾದಗಿರಿಯ ಬಿಜೆಪಿ ಪಕ್ಷದ ಕಚೇರಿಯಲ್ಲಿ ಸಚಿವರು ಮಾತನಾಡಿದರು. ಶಿಕ್ಷಕರ ವರ್ಗಾವಣೆ ಹಾಗೂ ಹೊಸ ಶಿಕ್ಷಕರ ನೇಮಕಾತಿ ಕುರಿತು ಹೆಚ್ಚಿನ ಗಮನ ಹರಿಸಲಾಗುವುದು.

ಈ ಹಿಂದಿನ ಶಿಕ್ಷಣ ಸಚಿವರ ಕೆಲಸಗಳನ್ನು ಕಾರ್ಯಗತಗೊಳಿಸಲು ಶ್ರಮಿಸಲಾಗುವುದು. ಅವರ ಸಲಹೆ ಪಡೆಯಲಾಗುವುದು. ತಮಗೆ ಶಿಕ್ಷಣ ಖಾತೆ ಲಭಿಸಿರುವುದರಿಂದ ಸಂತಸವಾಗಿದೆ. ತಮ್ಮ ಮೇಲೆ ನಂಬಿಕೆ ಇಟ್ಟು ಸವಾಲಿನ ಖಾತೆ ಕೊಟ್ಟ ಪಕ್ಷದ ನಾಯಕರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.

ಸಂಘಟನೆಯ ಬಲ ತಮ್ಮ ಜತೆಗೆ ಇರುವುದಿರಿಂದ ಮುಂದೆ ಬರುವ ಎಲ್ಲ ಸವಾಲುಗಳನ್ನು ಧೈರ್ಯದಿಂದ ಎದುರಿಸುತ್ತೇನೆ ಎಂದರು.

error: Content is protected !!